ದೇಶದ ಗಡಿ ದಾಟುತ್ತಿದ್ದ ಅಫ್ಘಾನಿ ಪ್ರಜೆಯನ್ನು ಬಂಧಿಸಿದ ಭಾರತೀಯ ಸೇನೆ - ವೈಟೆಕ್ ನೈಟ್​ ಕಾರ್ಪ್ಸ್​ ಜವಾನರು

🎬 Watch Now: Feature Video

thumbnail

By

Published : Aug 9, 2023, 1:38 PM IST

ಶ್ರೀನಗರ( ಜಮ್ಮು ಕಾಶ್ಮೀರ):  ಅಫ್ಘಾನಿ ಪ್ರಜೆಯೊಬ್ಬನನ್ನು ನಮ್ಮ ದೇಶದ ಗಡಿ ದಾಟುತ್ತಿದ್ದ ವೇಳೆ ಭಾರತದ ಸೇನೆ ಬಂಧಿಸಿದೆ. ಬಹಳ ಸಮಯದ ನಂತರ ಅಫ್ಘಾನಿ ಪ್ರಜೆಯೊಬ್ಬನನ್ನು ಭಾರತ ಸೇನೆ ಬಂಧಿಸಿದ್ದು, ಬಂಧಿತನನ್ನು ಕಾಬೂಲ್​ನ ಅಬ್ದುಲ್​ ವಾಹಿದ್​ ಎಂದು ಗುರುತಿಸಲಾಗಿದೆ. ವೈಟೆಕ್ ನೈಟ್​ ಕಾರ್ಪ್ಸ್​ ಜವಾನರು ಆತನನ್ನು ಹಿಡಿದು, ಹೆಚ್ಚಿನ ವಿಚಾರಣೆಗಾಗಿ ಪೂಂಚ್​ನ ಮೆಂಧರ್​ ವಿಭಾಗದ ಬಲಾಕೋಟ್​ ಸೆಕ್ಟರ್​ನಲ್ಲಿ ​ಜಮ್ಮು ಕಾಶ್ಮೀರ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. 

ಗಡಿಯಲ್ಲಿ ಉಗ್ರರನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆ: ಭಾರತದ ಗಡಿ ಪ್ರವೇಶಿಸುತ್ತಿರುವ ಉಗ್ರರನ್ನು ಮಟ್ಟ ಹಾಕಲು ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಇತ್ತೀಚೆಗೆ ದೇಶದ ಗಡಿಯೊಳಗೆ ನುಸುಳುತ್ತಿದ್ದ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿತ್ತು. ಈ ಕಾರ್ಯಾಚರಣೆಯಲ್ಲಿ ಒಟ್ಟು 7 ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ದೆಗ್ವಾರ್​ ಸೆಕ್ಟರ್​ನಲ್ಲಿ ಭಯೋತ್ಪಾದಕರ ಚಲನವಲನ ಗಮನಿಸಿದಾಗ ಭಾರತದ ಒಳನುಸುಳುವ ಪ್ರಯತ್ನ ಕಂಡು ಬಂದಿತ್ತು. ತಕ್ಷಣ ಎಚ್ಚೆತ್ತುಕೊಂಡ ಭಾರತೀಯ ಸೇನೆ ಸ್ಥಳೀಯ ಪೊಲೀಸರು ಜೊತೆ ಕಾರ್ಯಾಚರಣೆ ನಡೆಸಿ, ಉಗ್ರರನ್ನು ಹೊಡೆದುರುಳಿಸಿತ್ತು.

ಇದನ್ನೂ ಓದಿ: ಬಿಎಸ್‌ಎಫ್ - ಪೊಲೀಸ್ ಜಂಟಿ ಶೋಧ: ಪಂಜಾಬ್‌ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಡ್ರೋನ್ ವಶಕ್ಕೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.