ದಾವಣಗೆರೆಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ .. ಬೈಕ್​ಗಳಲ್ಲಿನ ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬಸವನಗರ ಪೊಲೀಸ್ ಠಾಣೆ

🎬 Watch Now: Feature Video

thumbnail

By

Published : Jun 18, 2023, 2:41 PM IST

ದಾವಣಗೆರೆ: ಪೆಟ್ರೋಲ್ ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಬೆಣ್ಣೆನಗರಿಯಲ್ಲಿ ಹೆಚ್ಚಾಗಿದೆ. ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳಲ್ಲಿ ಕಳ್ಳರು ಪೆಟ್ರೋಲ್ ಕದಿಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಮೊನ್ನೆ ದಿನ ತಡರಾತ್ರಿ ನಗರದ ದೇವರಾಜ್ ಅರಸು ಬಡಾವಣೆಯ ಸಿ ಬ್ಲಾಕ್​ನಲ್ಲಿ ಈ ಘಟನೆ ನಡೆದಿದೆ. ಇದೇ ಬಡಾವಣೆಯ ಮಸೀದಿ ರಸ್ತೆಯಲ್ಲಿ ಬರುವ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಲ್ಲಿ ಪೆಟ್ರೋಲ್ ಕದಿಯಲಾಗಿದೆ.

ಮೊದಲಿಗೆ ಖಾಲಿ ಬಾಟಲ್ ಮೂಲಕ ಆಗಮಿಸಿದ ಖದೀಮರು ದ್ವಿಚಕ್ರ ವಾಹನದ ಪೆಟ್ರೋಲ್ ಪೈಪ್ ಕಿತ್ತು, ಅದಕ್ಕೆ ಬಾಟಲ್ ಇರಿಸಿ ಅದು ತುಂಬುವ ತನಕ ಬೇರೊಂದು ಕಡೆ ಹೋಗಿ, ಮರಳಿ ಬಂದು ಆ ತುಂಬಿದ ಬಾಟಲ್ ತೆಗೆದುಕೊಂಡು ಎಸ್ಕೇಪ್​ ಆಗುವ​ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಪೆಟ್ರೋಲ್​ ಕಳ್ಳತನದಿಂದ ಹೈರಾಣಾದ ದೇವರಾಜ್ ಅರಸ್ ಬಡಾವಣೆಯ ನಿವಾಸಿಗಳು, ಈ ಬಗ್ಗೆ ಪೊಲೀಸರ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ.

ರಾತ್ರಿ ಮನೆಯ ಎದುರೇ ಬೈಕ್​ ನಿಲ್ಲಿಸಿದ್ದರೂ, ಜೂನ್​ 17 ಬೆಳಗ್ಗೆ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇದರ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸಮೀಪದ ಬಸವನಗರ ಪೊಲೀಸ್ ಠಾಣೆಯಲ್ಲಿ ಪೆಟ್ರೋಲ್ ಕಳ್ಳತನ ಬಗ್ಗೆ ಪರಿಶೀಲಿಸುವಂತೆ ನಿವಾಸಿಗಳು ದೂರು ನೀಡಿದ್ದಾರೆ.‌ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

ಇದನ್ನೂಓದಿ:Police transfer: ಹು-ಧಾ ಮತ್ತು ಮಂಗಳೂರು ಪೊಲೀಸ್ ಕಮಿಷನರೆಟ್​ನಲ್ಲಿ ವರ್ಗಾವಣೆ ಪರ್ವ.. ಏಕಕಾಲಕ್ಕೆ 190ಕ್ಕೂ ಹೆಚ್ಚು ಸಿಬ್ಬಂದಿ ದಿಢೀರ್ ವರ್ಗಾವಣೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.