ನಾನು ಟ್ರೆಂಡ್ ನೋಡಿಲ್ಲ, ಮಧ್ಯಪ್ರದೇಶ ಮತದಾರರ ಮೇಲೆ ನಂಬಿಕೆ ಇದೆ: ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ - Madhya Pradesh congress
🎬 Watch Now: Feature Video
Published : Dec 3, 2023, 10:20 AM IST
ಭೋಪಾಲ್(ಮಧ್ಯಪ್ರದೇಶ): ಇನ್ನೇನು ಕೆಲವೇ ಹೊತ್ತಲ್ಲಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಛತ್ತೀಸ್‌ಗಢ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಕಚೇರಿ ಸಮೀಪ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್, "ನಾನು ಯಾವುದೇ ಟ್ರೆಂಡ್ ನೋಡಿಲ್ಲ, ಆದರೆ ಮಧ್ಯಪ್ರದೇಶದ ಮತದಾರರು ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಸ್ಥಾನಗಳ ಸಂಖ್ಯೆಯನ್ನು ಲೆಕ್ಕಿಸಬೇಡಿ. ನಾವು ಗೆಲ್ಲಲಿದ್ದೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ರಾಹುಲ್ ಗಾಂಧಿ ಯಾತ್ರೆ ಎಫೆಕ್ಟ್, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಖಚಿತ': ಮಾಣಿಕ್ ರಾವ್ ಠಾಕ್ರೆ
ಮಧ್ಯಪ್ರದೇಶದಲ್ಲಿ ಒಟ್ಟು 230 ವಿಧಾನಸಭಾ ಕ್ಷೇತ್ರಗಳಿವೆ. ನವೆಂಬರ್ 17ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಮತದಾರರು ಬರೆದ ಅಭ್ಯರ್ಥಿಗಳ ಹಣೆಬರಹ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣವಾಗಿ ತಿಳಿಯಲಿದೆ.
ರಾಜ್ಯದ ಸದ್ಯದ ಫಲಿತಾಂಶ: ಬಿಜೆಪಿ- 160, ಕಾಂಗ್ರೆಸ್- 65 ಮತ್ತು ಇತರರು-5 ಸ್ಥಾನಗಳಲ್ಲಿ ಮುಂದಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಚುನಾವಣಾ ಫಲಿತಾಂಶ: ಮತ ಎಣಿಕೆ ಆರಂಭ