ಆಟಗಾರರನ್ನು ಭೇಟಿ ಮಾಡಿ ಧೈರ್ಯ ತುಂಬುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ : ಸೆಹ್ವಾಗ್ ಗುಣಗಾನ - etv bharat kannada
🎬 Watch Now: Feature Video
Published : Nov 25, 2023, 6:55 PM IST
ನವದೆಹಲಿ: ತಂಡವೊಂದು ಸೋತ ಬಳಿಕ ಆ ತಂಡದ ಆಟಗಾರರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬುವಂತಹ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ ಎಂದು ವಿರೇಂದ್ರ ಸೆಹ್ವಾಗ್ ಪ್ರಧಾನಿ ಮೋದಿ ಅವರ ಗುಣಗಾನ ಮಾಡಿದ್ದಾರೆ. ಭಾರತ ವಿಶ್ವಕಪ್ ಸೋಲಿನ ಬಳಿಕ ಖುದ್ಧ ಪ್ರಧಾನಿ ಮೋದಿ ಅವರೇ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ಗೆ ತೆರಳಿ ಆಟಗಗಾರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಈ ಬಗ್ಗೆ ಮಾಜಿ ಕ್ರಿಕೆಟರ್ ಸೆಹ್ವಾಗ್ ಮಾತನಾಡಿದ್ದಾರೆ.
ಯಾವುದೇ ತಂಡವಾಗಲಿ ವಿಶ್ವಕಪ್ ನಂತಹ ದೊಡ್ಡ ಟೂರ್ನಿಯಲ್ಲಿ ಸೋಲನುಭವಿಸಿದ ಬಳಿಕ ಆ ದೇಶದ ಪ್ರಧಾನಿಯಾದವರು ಆಟಗಾರರನ್ನು ಭೇಟಿ ಮಾಡಿ ಧೈರ್ಯ ತುಂಬಿರುವುದು ಹಿಂದೆಂದೂ ನಾನು ನೋಡಿಲ್ಲಿ. ಇಂತಹ ಟೂರ್ನಿಗಳಲ್ಲಿ ತಂಡಗಳು ಸೋತಾಗ ಆಟಗಾರರಿಗೆ ಧೈರ್ಯ ತುಂಬುವುದು ಬಹಳ ಮುಖ್ಯವಾಗುತ್ತದೆ. ಅದನ್ನು ಪ್ರಧಾನಿ ಮೋದಿ ಅವರು ಮಾಡಿದ್ದಾರೆ.
ಇದರಿಂದ ಆಟಗಾರರ ಸೋಲಿನ ಸುಳಿಯಿಂದ ಹೊರ ಬರಲು ಸಾಧ್ಯವಾಗುತ್ತದೆ. ಮುಂಬರುವ ಇಂತಹ ಟೂರ್ನಿಯಲ್ಲಿ ಇನ್ನೂ ಅದ್ಭುತ ಪ್ರದರ್ಶನ ನೀಡಲು ಸಹಾಯಕವಾಗುತ್ತದೆ. ಈ ಬಾರಿಯ ವಿಶ್ವಕಪ್ ನಮಗೆ ಗೆಲ್ಲುಲು ಆಗಿಲ್ಲ ಆದರೇ ಮುಂಬರು ವಿಶ್ವಕಪ್ ಗೆಲ್ಲಲು ಪ್ರಯತ್ನಿಸಲಾಗುತ್ತದೆ ಎಂದರು.
ಅಲ್ಲದೇ ವಿಶ್ವಕಪ್ ಇಂತಹ ವ್ಯಕ್ತಿಯಿಂದಲೇ ಸೋಲನ್ನು ಕಂಡಿತು ಎಂದು ಹೇಳುವುದ ಸರಿಯಲ್ಲ. ತಂಡ ಗೆದ್ದಾಗ ಹೊಗಳುವುದು, ಸೋತಾಗ ದೋಷಿಸುವುದು ಸೂಕ್ತವಲ್ಲ. ಯಾವುದೇ ಕ್ರೀಡೆಯ ಆಟಗಾರರಿರಲಿ ಅವರನ್ನು ಭೇಟಿ ಮಾಡಿ ಸ್ಪೂರ್ತಿ ತುಂಬುವ ಕೆಲಸ ಮಾಡಿದರೆ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದನ್ನು ನಮ್ಮ ಪ್ರಧಾನಿ ಮೋದಿ ಅವರು ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿಯಾಗಿದೆ ಎಂದು ಸೆಹ್ವಾಗ್ ಗುಣಗಾನ ಮಾಡಿದರು.
ಇದನ್ನೂ ಓದಿ: ವಿಶ್ವಕಪ್ನಲ್ಲಿ ಭಾರತಕ್ಕೆ ಸೋಲು: ತೀವ್ರ ನಿರಾಶೆಗೊಂಡ ರೋಹಿತ್ ಬಳಗಕ್ಕೆ ಮತ್ತೆ ಧೈರ್ಯ ತುಂಬಿದ ಕಪಿಲ್ ದೇವ್