ಹುಬ್ಬಳ್ಳಿ: ಪಾದಚಾರಿಗೆ ಗುದ್ದಿದ ಬೈಕ್​ ಸವಾರ.. ಇಬ್ಬರೂ ಸ್ಥಳದಲ್ಲೇ ಸಾವು - ಹುಬ್ಬಳ್ಳಿಯ ಈಶ್ವರ ನಗರ

🎬 Watch Now: Feature Video

thumbnail

By

Published : Aug 19, 2023, 4:01 PM IST

ಹುಬ್ಬಳ್ಳಿ: ವೇಗವಾಗಿ ಬಂದ ಬೈಕ್ ಸವಾರ, ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಪಾದಚಾರಿ ಹಾಗೂ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಗೆ ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಬೈಕ್​ ಸವಾರ ಎಪಿಎಂಸಿಯಿಂದ ಈಶ್ವರ ನಗದತ್ತ ಬರುತ್ತಿದ್ದ ಮಗದುಮ್ ಎಂಬ ಕಾರ್ಮಿಕನಿಗೆ ಡಿಕ್ಕಿ ಹೊಡೆದಿದ್ದಾರೆ. ಬೈಕ್​ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ಮಿಕ ವ್ಯಕ್ತಿ ಸುಮಾರು 20 ಅಡಿ ಮುಂದೆ ಹೋಗಿ ಬಿದ್ದಿದ್ದು, ಸವಾರ ಕೂಡ ನೆಲಕ್ಕುರಳಿದ್ದಾನೆ.

ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಶೀಲನೆ ನಡೆಸಿ, ಮೃತದೇಹಗಳನ್ನು ಕಿಮ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಉತ್ತರ ಸಂಚಾರಿ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. 

ಇತ್ತೀಚೆಗೆ ಅಪಘಾತದಲ್ಲಿ ಅಪ್ಪ ಮಗಳು ಸಾವು: ಬೈಕ್​ ಹಾಗೂ ಗೂಡ್ಸ್​ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿ ತಾಯಿ- ಮಗ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಇತ್ತೀಚೆಗೆ ಕಲಬುರಗಿಯ ಹೊರವಲಯದ ಜೇವರ್ಗಿ ಹೆದ್ದಾರಿಯಲ್ಲಿ ನಡೆದಿತ್ತು.

ಇದನ್ನೂ ನೋಡಿ : Watch: ನಿಂತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದ ಸಾರಿಗೆ ಬಸ್​.. ಓರ್ವ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ: ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.