ಹೊರಹರಿವು ಹೆಚ್ಚಳ: ಹೊಗೆನಕಲ್ನಲ್ಲಿ ಕಾವೇರಿ ಜಲವೈಯಾರ - ಹೊಗೆನಕಲ್ ಜಲಪಾತ
🎬 Watch Now: Feature Video
ಚಾಮರಾಜನಗರ: ಕಾವೇರಿ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದ ನಯಾಗರ ಎಂದೇ ಪ್ರಸಿದ್ಧಿಯಾದ ಹೊಗೆನಕಲ್ ಜಲಪಾತ(Hogenakkal Falls)ದಲ್ಲಿ ಜಲವೈಯಾರ ಸೃಷ್ಟಿಯಾಗಿದೆ. ಚಾಮರಾಜನಗರ ಮತ್ತು ತಮಿಳುನಾಡಿನ ಧರ್ಮಪುರಿ ಎರಡೂ ಜಿಲ್ಲೆಗಳ ಜಲಗಡಿಯಾದ ಹೊಗೆನಕಲ್ನಲ್ಲಿ ಕಾವೇರಿಯ ರುದ್ರ ರಮಣೀಯತೆ ಜೋರಾಗಿದೆ. ಜಲವೈಭವ ಕಾಣಲು ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ. ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಪ್ರವಾಸಿಗರು ಮಿಂದೇಳುತ್ತಿದ್ದಾರೆ. ಕಣ್ಣು ಹಾಯಿಸಿದಷ್ಟು ಕಾಣುವ ನೀರಲ್ಲಿ ತೆಪ್ಪ ಸವಾರಿ ನಡೆಸಿ ರೋಮಾಂಚಕ ಅನುಭವ ಪಡೆಯುತ್ತಿದ್ದಾರೆ. ಕರ್ನಾಟಕ ಭಾಗಕ್ಕಿಂತ ತಮಿಳುನಾಡು ಭಾಗದ ಪ್ರವಾಸಿಗರ ಜಾತ್ರೆಯೇ ಸೇರುತ್ತಿದೆ.
ಹೊಗೆನಕಲ್ ಜಲಪಾತದ ಬಗ್ಗೆ ಒಂದಿಷ್ಟು: ಹೊಗೆನಕಲ್ ಜಲಪಾತ ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದ್ದು. ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೊರದಲ್ಲಿದೆ. ಭಾರತದ "ನಯಾಗರ ಜಲಪಾತ"ವೆಂದೇ ಸುಪ್ರಸಿದ್ಧ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ. ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂಬ ಹೆಸರು ಬಂದಿದೆ. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ.
ಇದನ್ನೂ ಓದಿ: ಹೊಗೆನಕಲ್ನಲ್ಲಿ ರೋಮಾಂಚಕ ತೆಪ್ಪಗಳ ರೇಸ್; ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನ