ದೀಪಾವಳಿಗೆ ಊರಿನತ್ತ ಪಯಣ, ಪಟಾಕಿ ಖರೀದಿಗೆ ಮುಗಿಬಿದ್ದ ಜನ: ಬೆಂಗಳೂರಲ್ಲಿ ಟ್ರಾಫಿಕ್​ ಜಾಮ್ VIDEO

🎬 Watch Now: Feature Video

thumbnail

By ETV Bharat Karnataka Team

Published : Nov 12, 2023, 8:54 AM IST

ಆನೇಕಲ್ (ಬೆಂಗಳೂರು):  ಹೈಕೋರ್ಟ್ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಬೆನ್ನಲ್ಲೇ ತಾಲೂಕಿನ ಅತ್ತಿಬೆಲೆ ಗಡಿ ಪ್ರದೇಶದಲ್ಲಿ ಪಟಾಕಿ ಖರೀದಿಸಲು ಜನರು ಶನಿವಾರ ಮುಗಿಬಿದ್ದಿದ್ದರು. ಇದರಿಂದ ಇಲ್ಲಿನ ಎಲ್ಲಾ ಅಂಗಡಿಗಳು ಜನರಿಂದ ಫುಲ್ ತುಂಬಿದ್ದ ದೃಶ್ಯ ಕಂಡು ಬಂತು. ಇನ್ನು ಹಬ್ಬದ ಹಿನ್ನೆಲೆಯಲ್ಲಿ ಜನರು ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಪರಿಣಾಮವಾಗಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ವಾಹನ ದಟ್ಟಣೆ ಉಂಟಾಗಿತ್ತು.

ಆನೇಕಲ್​ ತಾಲೂಕಿನಾದ್ಯಂತ ನವೆಂಬರ್ 17 ವರೆಗೆ ಪಟಾಕಿ ಮಾರಾಟಕ್ಕೆ ಹೈಕೋರ್ಟ್​ ಅನುಮತಿ ನೀಡಿದೆ. ಈ ಹಿನ್ನೆಲೆ ನಗರದ ಜನರು ತಮ್ಮ ತಮ್ಮ ವಾಹನಗಳಲ್ಲಿ ಹೊಸೂರು ಗಡಿ ಪ್ರದೇಶವಾದ ಅತ್ತಿಬೆಲೆಗೆ ಪಟಾಕಿ ಕೊಳ್ಳಲು ಆಗಮಿಸಿದ್ದರು. ಇದು ಸಂಚಾರ ದಟ್ಟಣೆ ಉಂಟಾಗಲು ಕಾರಣವಾಗಿತ್ತು. ಹಬ್ಬರದ ಹಿನ್ನೆಲೆ ನಗರದಲ್ಲಿ ನೆಲೆಸಿದ್ದ ಜನರು ಊರಿಗೆ ತೆರಳುತ್ತಿದ್ದರಿಂದಲೂ ವಾಹನ ದಟ್ಟನೆ ಹೆಚ್ಚಾಗಿತ್ತು.

ಹೆದ್ದಾರಿಯಲ್ಲಿ ಗಂಟೆಗಟ್ಟಲೆ ನಿಂತ ವಾಹನಗಳು : ಶನಿವಾರ ಮಧ್ಯಾಹ್ನದಿಂದಲೇ ಹೊಸೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಕಂಡುಬಂತು. ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಇದನ್ನೂ ಓದಿ : ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ದೀಪಾವಳಿ ಸಂಭ್ರಮ: ದುಬಾರಿ ದರದ ನಡುವೆಯೂ ಭರ್ಜರಿ ವಹಿವಾಟು 

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.