ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಹೈಟೆನ್ಷನ್ ವಿದ್ಯುತ್ ಕಂಬ: ವಿಡಿಯೋ - ರಾಗಿಮುದ್ದನಹಳ್ಳಿ ಗ್ರಾಮ
🎬 Watch Now: Feature Video
Published : Jan 12, 2024, 5:45 PM IST
|Updated : Jan 12, 2024, 9:30 PM IST
ಮಂಡ್ಯ : ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಹೆದ್ದಾರಿಯಲ್ಲಿ ಹೈಟೆನ್ಷನ್ ಕಬ್ಬಿಣದ ವಿದ್ಯುತ್ ಕಂಬವೊಂದು ಬೈಕ್ ಸವಾರನ ಮೇಲೆ ಉರುಳಿ ಬಿದ್ದಿದೆ. ಆದರೆ, ಅದೃಷ್ಟವಶಾತ್ ಆಶ್ಚರ್ಯಕರ ರೀತಿ ಸವಾರ ಪ್ರಾಣಾಪಾಯದಿಂದ ಬಚಾವ್ ಆಗಿರುವ ಘಟನೆ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾಂ ಸುರೇಶ್ ಅವರು ಮಂಡ್ಯದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಹೆದ್ದಾರಿಯ ಬಳಿ ಬರುತ್ತಿದ್ದಾಗ ಗಾಳಿಗೆ ಹೈಟೆನ್ಷನ್ ವಿದ್ಯುತ್ ಕಂಬ ಮುರಿದು ಸುರೇಶ್ ಅವರ ದ್ವಿಚಕ್ರ ವಾಹನದ ಹೆಡ್ಲೈಟ್ ಮೇಲೆ ಬಿದ್ದಿದೆ. ವಿದ್ಯುತ್ ಕಂಬ ಬಿದ್ದ ರಭಸಕ್ಕೆ ಬೈಕ್ ಸವಾರ ಕೆಳಗೆ ಬಿದ್ದಿದ್ದಾರೆ. ಅಲ್ಲದೇ, ಸಣ್ಣಪುಟ್ಟ ಗಾಯಗಳೂ ಆಗಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಗ್ರಾಮಸ್ಥರು ಗಾಯಾಳುವನ್ನ ಉಪಚರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವೀಸ್ ರಸ್ತೆಯ ಮೇಲೆ ವಿದ್ಯುತ್ ತಂತಿ ಬಿದ್ದಿರುವುದರಿಂದ ಸರತಿ ಸಾಲಿನಲ್ಲಿ ನಿಂತ ವಾಹನಗಳಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಇನ್ನು ಈ ವೇಳೆ ಹೆದ್ದಾರಿಯಲ್ಲಿ ಆಗಲಿ, ಸರ್ವಿಸ್ ರಸ್ತೆಯಲ್ಲಿ ಆಗಲಿ ವಾಹನಗಳ ಸಂಚಾರ ಇರಲಿಲ್ಲ. ಏನಾದರೂ
ಬೇರೆ ವಾಹನಗಳು ಇದ್ದಿದ್ದರೆ ಬಾರಿ ಅನಾಹುತ ಸಂಭವಿಸುತ್ತಿತ್ತು. ಸಾಕಷ್ಟು ಪ್ರಾಣಹಾನಿ ಆಗುತ್ತಿತ್ತು. ಇನ್ನು ವಿದ್ಯುತ್ ಕಂಬ ಬೀಳುತ್ತಿದ್ದಂತೆ ಕರೆಂಟ್ ಸಹ ಹೋಗಿದೆ. ಸರ್ವಿಸ್ ರಸ್ತೆಯಲ್ಲಿಯೇ ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
ಸ್ಥಳಕ್ಕೆ ಎಇಇ ಜಯಪ್ರಕಾಶ್ ಭೇಟಿ ನೀಡಿ, ವಿದ್ಯುತ್ ಕಂಬವನ್ನ ತೆರವುಗೊಳಿಸಿದರು. ಈ ರೀತಿಯ ಘಟನೆ ನಡೆಯಬಾರದು. ಹೆದ್ದಾರಿ ಪ್ರಾಧಿಕಾರದವರಿಗೆ ಸೂಚನೆ ಕೊಟ್ಟಿದ್ದೇವೆ. ಅವರು ಸರಿಪಡಿಸುವುದಾಗಿ ತಿಳಿಸಿದ್ದಾರೆ. ವಿದ್ಯುತ್ ಕಂಬಗಳ ಸಪೋರ್ಟ್ ರಾಡ್ಗಳನ್ನ ಕಳ್ಳರು ಬಿಚ್ಚಿರುವುದರಿಂದ ಈ ರೀತಿ ಆಗಿದೆ. ಶೀಘ್ರವಾಗಿ ಇದರ ಬಗ್ಗೆ ಕ್ರಮ ವಹಿಸಲಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಆಟೋ ಮೇಲೆ ಬಿದ್ದ ವಿದ್ಯುತ್ ಕಂಬ; ಪವಾಡದಂತೆ ಪಾರಾದ ಚಾಲಕ, ಗ್ರಾಹಕರು