ಕೋಲಾರದಲ್ಲೂ ವರುಣನ ಆರ್ಭಟ.. ವಾಹನ ಸವಾರರ ಪರದಾಟ - ಕೃಷಿ ಭೂಮಿ ಹದ ಮಾಡಿಕೊಳ್ಳಲು ಮುಂದಾದ ಜನ
🎬 Watch Now: Feature Video
ಕೋಲಾರ : ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ವಾಹನ ಸಾವರರು ಪರದಾಡಿದರು. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಜೋರು ಮಳೆಯಾಗುವ ಮೂಲಕ ಜಿಲ್ಲೆಯ ಹಲವೆಡೆ ಮಳೆರಾಯ ತಂಪೆರೆದಿದ್ದಾನೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮಳೆ ಅಬ್ಬರ, ನೀರಿನಲ್ಲಿ ಕೊಚ್ಚಿಹೋದ ಬೈಕ್ಗಳು.. ಅವ್ಯವಸ್ಥೆಗೆ ಬೇಸತ್ತು ಯುವಕ ಹೀಗ್ ಮಾಡೋದಾ!
ಕೃಷಿ ಭೂಮಿ ಹದ ಮಾಡಿಕೊಳ್ಳಲು ಮುಂದಾದ ಜನ: ಕೋಲಾರ ನಗರದಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಾದ ಹಿನ್ನೆಲೆ ಹಲವೆಡೆ ಮರಗಳು ನೆಲಕ್ಕುರುಳಿದ್ದವು. ಕಳೆದ ಒಂದು ವಾರದಿಂದ ಬಿಸಿಲ ಬೇಗೆಗೆ ಬೆಂಡಾಗಿದ್ದ ಜನರು ಕೊಂಚ ಕೂಲ್ ಆದರು. ಜಿಲ್ಲೆಯ ಹಲವೆಡೆ ಉತ್ತಮವಾದ ಮಳೆಯಾದ ಹಿನ್ನೆಲೆ ರೈತರು ಸಹ ತಮ್ಮ ಕೃಷಿ ಭೂಮಿಗಳನ್ನ ಹದ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೋರು ಮಳೆಯಿಂದಾಗಿ ಭೂಮಿ ಅಲ್ಲಲ್ಲಿ ತಂಪು ತಂಪಾಗಿದ್ದರಿಂದ ಉತ್ತಮ ವಾತಾವರಣ ನಿರ್ಮಾಣವಾಗಿತ್ತು.
ಬೆಂಗಳೂರಿನಲ್ಲಿ ವರುಣ ಆರ್ಭಟಿಸಿದ್ದರಿಂದ ಹಲವು ಅವಾಂತರಗಳು ಉಂಟಾಗಿವೆ. ವಿಠಲ್ ಮಲ್ಯ ರಸ್ತೆಯಲ್ಲಿ ಶನಿವಾರ ಸಂಜೆ ಉರುಳಿಬಿದ್ದಿದ್ದ ಮರವನ್ನು ಟ್ರಾಫಿಕ್ ಇನ್ಸ್ಪೆಕ್ಟರ್ ಗಣೇಶ್ ರಾವ್ ತೆರವುಗೊಳಿಸಿದ್ದರು.
ಇದನ್ನೂ ಓದಿ: ಮುಂದಿನ 2 ದಿನ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ