ಕಡೂರು ತಾಲೂಕಿನಲ್ಲಿ ಭಾರಿ ಮಳೆ, ಹಾರಿಹೋದ ಮನೆಯ ಹೆಂಚುಗಳು.. ನೆಲಕ್ಕುರುಳಿದ ತೆಂಗಿನ ಮರಗಳು - ರಾಷ್ಟ್ರೀಯ ಹೆದ್ದಾರಿ 206
🎬 Watch Now: Feature Video
Published : Nov 9, 2023, 9:15 PM IST
ಚಿಕ್ಕಮಗಳೂರು : ಬಹಳ ದಿನಗಳ ನಂತರ ಜಿಲ್ಲೆಯ ಬಯಲು ಸೀಮೆ ಭಾಗದಲ್ಲಿ ಭಾರಿ ಮಳೆ ಸುರಿಯಲಾರಂಭಿಸಿದೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಈ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನಿಜಕ್ಕೂ ಈ ಭಾಗದ ಜನರು ಹೈರಣಾಗಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗಳು ಕೊಚ್ಚಿ ಹೋಗುತ್ತಿವೆ. ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮೂರು ಅಡಿ ಎತ್ತರಕ್ಕೆ ನೀರು ನಿಂತುಕೊಂಡಿದೆ. ಶಿವಮೊಗ್ಗ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಟ ನಡೆಸುತ್ತಿದ್ದು, ರಸ್ತೆಯ ಮೇಲೆ ನೀರು ನದಿಯಂತೆ ಹರಿಯಲು ಪ್ರಾರಂಭವಾಗಿದೆ.
ಕಡೂರು ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಚಿಕ್ಕಮಗಳೂರು ನಗರ, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ತುಂತುರು ಮಳೆ ಸುರಿಯಲು ಪ್ರಾರಂಭವಾಗಿದೆ. ಮಹಾಮಳೆಗೆ ಕಡೂರು ತಾಲೂಕು ಅಲ್ಲೋಲ-ಕಲ್ಲೋಲವಾಗುತ್ತಿದೆ. ತರಗೆಲೆಯಂತೆ ಮನೆಯ ಹೆಂಚುಗಳು ಗಾಳಿ ಮಳೆಗೆ ಹಾರಿ ಹೋಗುತ್ತಿವೆ.
ಬುಡಸಮೇತ ಬೃಹತ್ ತೆಂಗಿನ ಮರಗಳು ನೆಲಕ್ಕೆ ಬೀಳುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಡೂರು ತಾಲೂಕು ತಲ್ಲಣವಾಗಿದೆ. ಕಡೂರು ತಾಲೂಕಿನ ದೇವನೂರು, ಕುರುಬರಹಳ್ಳಿ ಸುತ್ತಮುತ್ತ ಘಟನೆ ನಡೆದಿದ್ದು, 20 ಕ್ಕೂ ಹೆಚ್ಚು ಮನೆಯ ಹೆಂಚುಗಳು ಹಾರಿ ಹೋಗಿವೆ.
ಇದನ್ನೂ ಓದಿ : ರಾಜ್ಯದಲ್ಲಿ ಹಿಂಗಾರು ಮಳೆ ಚುರುಕು: 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ