ಹನೂರಲ್ಲಿ ದಳಪತಿ ಭರ್ಜರಿ ರೋಡ್ ಶೋ: ತಾಲೂಕು ದತ್ತು ವಾಗ್ದಾನ - election news
🎬 Watch Now: Feature Video
ಚಾಮರಾಜನಗರ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಇಂದು ಹೆಚ್‌ಡಿ ಕುಮಾರಸ್ವಾಮಿ ಅವರು ಭರ್ಜರಿ ರೋಡ್ ಶೋ ನಡೆಸಿ ಹನೂರು ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂಆರ್ ಮಂಜುನಾಥ್ ಪರ ಮತಬೇಟೆ ನಡೆಸಿದರು.
ಸರ್ಕಾರ ರಚನೆ ಬಳಿಕ ಹನೂರು ತಾಲೂಕನ್ನು ದತ್ತು ತೆಗೆದುಕೊಂಡು ರಾಮನಗರದ ಹಾಗೇ ಮಾದರಿ ಅಭಿವೃದ್ಧಿ ಮಾಡುವ ಜೊತೆಗೆ, ಮಂಜುನಾಥ್ ಗೆಲ್ಲಿಸಿಕೊಟ್ಟರೇ ಮಂತ್ರಿ ಮಾಡುತ್ತೇನೆ ಎಂದು ಹನೂರಿನ ಜನತೆಗೆ ವಾಗ್ದಾನ ಕೊಟ್ಟರು. 15 ಸಾವಿರಕ್ಕೂ ಅಧಿಕ ಮಂದಿ ಈ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಡಾ. ಬಿಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೆಚ್ಡಿಕೆ ಅವರಿಗೆ ಸಾಥ್ ಕೊಟ್ಟು ಮಂಜುನಾಥ್ ಅವರಿಗೆ ಮತ ನೀಡಿದರೆ ಸಂವಿಧಾನದ ಮೇಲೆ ಗೌರವವಿರುವ ವ್ಯಕ್ತಿಗೆ ಮತ ಕೊಟ್ಟಂತೆ ಎಂದು ಬಣ್ಣಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಆಶ್ವಾಸನೆ.. ಬಿಜೆಪಿಯಿಂದ ತೀವ್ರ ಆಕ್ರೋಶ, ಪರ - ವಿರೋಧದ ಚರ್ಚೆ