ನಾನು ಆರ್ಎಸ್ಸ್ನ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ: ಶಾಸಕ ಹೆಚ್.ಡಿ. ತಮ್ಮಯ್ಯ - etv bharat kannada
🎬 Watch Now: Feature Video
ಚಿಕ್ಕಮಗಳೂರು: ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿದ್ದರೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ತಾಲೂಕಿನ ತೇಗೂರು ಗ್ರಾಮದಲ್ಲಿ ಜಿಲ್ಲಾ ಸಾಮಿಲ್ ಮಾಲೀಕರು ಹಾಗೂ ಟಿಂಬರ್ ವ್ಯಾಪಾರಿಗಳ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಹಿಂದೆ 16 ವರ್ಷಗಳ ಕಾಲ ಬಿಜೆಪಿಯಲ್ಲಿದ್ದೆ, ಈಗಲೂ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕ ಎಂದರು.
ಈ ಹಿಂದೆ ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದಾಗ ದೇವಸ್ಥಾನ, ಜಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ದಾನಿಗಳ ಬಳಿ ಹಣ ಸಂಗ್ರಹಕ್ಕೆ ಹೋದಾಗ ದಾನಿಗಳು ನೀಡುತ್ತಿದ್ದ 500 ರೂಪಾಯಿ ನಮಗೆ ದೊಡ್ಡ ಹಣವಾಗಿತ್ತು. ಅದನ್ನ ಚಂದಾ ವಸೂಲಿ ಎಂದು ಹೇಳುತ್ತಿರಲಿಲ್ಲ. ಅದನ್ನು ಸಂಘದಲ್ಲಿ ಸಂಗ್ರಹ ಎಂದು ಹೇಳಿಕೊಟ್ಟಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತು ಕಲಿಸಿದೆ, ನಾನು ಸಂಘದ ಸ್ವಯಂ ಸೇವಕ, ನಾನು ಜಾತ್ಯತೀತ ವ್ಯಕ್ತಿ ಈ ನಿಟ್ಟಿನಲ್ಲೇ ಪ್ರಮಾಣವಚನವನ್ನು ಸ್ವೀಕರಿಸಿದ್ದೇನೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ಶಾಂತಿ ಸೌಹಾರ್ದತೆ ಕಾಪಾಡುವುದು ನನ್ನ ಮೊದಲ ಆದತ್ಯೆ ಎಂದು ಹೇಳಿದರು.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಪತ್ನಿಗೆ ಖಾಯಂ ಉದ್ಯೋಗ ನೀಡುವಂತೆ ಸಿದ್ದರಾಮಯ್ಯಗೆ ಪತ್ರ ಬರೆಯುವೆ: ನಳಿನ್ ಕುಮಾರ್ ಕಟೀಲ್