ಗುಜರಾತ್‌ನ ಹಲವೆಡೆ ಧಾರಾಕಾರ ಮಳೆ; ಅಂಡರ್ಪಾಸ್ನಲ್ಲಿ ಮುಳುಗಿದ ಕಾರು- ವಿಡಿಯೋ - ಮಳೆಯ ಅಬ್ಬರ
🎬 Watch Now: Feature Video
ಗುಜರಾತ್: ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಗುಜರಾತ್ ಸೇರಿದಂತೆ ವಿವಿಧೆಡೆ ವರ್ಷಧಾರೆಯ ಅಬ್ಬರ ಜೋರಾಗಿದೆ. ಕಳೆದ ನಾಲ್ಕು ದಿನಗಳಿಂದ ನವಸಾರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ. ನೀರಿನಿಂದ ತುಂಬಿದ್ದ ಅಂಡರ್‌ಪಾಸ್ ದಾಟಲು ಯತ್ನಿಸಿದಾಗ ಕಾರೊಂದು ಮುಳುಗಿದ ಘಟನೆ ನಡೆಯಿತು. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ನೆರವಿನಿಂದ ರಕ್ಷಿಸಲಾಯಿತು.
ಜುನಾಗಢದ ಪೋರಬಂದರ್ ಜಿಲ್ಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ. ನದಿ ನೀರು ಹೊಲಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಪ್ರಾಚಿ ಗ್ರಾಮದ ಬಳಿ ಸರಸ್ವತಿ ನದಿಗೆ ನಿರ್ಮಿಸಲಾದ ಮಾಧವರಾಯ ದೇವಸ್ಥಾನ ಜಲಾವೃತವಾಗಿದೆ.
ಜೂನ್ 22ರಂದು ಅಧಿಕೃತವಾಗಿ ಗುಜರಾತ್ ಪ್ರವೇಶ ಮಾಡಿದ್ದ ಮುಂಗಾರು, ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ಸುರಿಯುತ್ತಿದೆ. ಜೋರು ಮಳೆಯಿಂದಾಗಿ ರಸ್ತೆಗಳು ಕೊಚ್ಚಿ ಹೋಗಿವೆ. ಹಲವೆಡೆ ವಿದ್ಯುತ್ ಕಂಬ, ಮರಗಳು ಧರೆಗುರುಳಿವೆ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಒಂದೂವರೆ ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡ ಸೇತುವೆ ಮೊದಲ ಮಳೆಗೆ ಬಿರುಕು