ರಾಜ್ಯಸಭಾ ಚುನಾವಣೆ: ಗುಜರಾತ್​ನಿಂದ ನಾಮಪತ್ರ ಸಲ್ಲಿಸಿದ ಎಸ್ ಜೈಶಂಕರ್

🎬 Watch Now: Feature Video

thumbnail

ಗಾಂಧಿನಗರ (ಗುಜರಾತ್): ಮುಂಬರುವ ರಾಜ್ಯಸಭಾ ಚುನಾವಣೆಗೆ ಗುಜರಾತ್‌ನ ಗಾಂಧಿನಗರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇಂದು ನಾಮಪತ್ರ ಸಲ್ಲಿಸಿದರು. ಗುಜರಾತ್‌ನಿಂದ 3 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎಸ್ ಜೈಶಂಕರ್, ಜುಗಲ್ಜಿ ಠಾಕೂರ್ ಮತ್ತು ದಿನೇಶ್ ಅನವಾಡಿಯಾ ಸೇರಿದಂತೆ ಮೂವರು ಬಿಜೆಪಿ ರಾಜ್ಯಸಭಾ ಸದಸ್ಯರ ಅವಧಿ ಆಗಸ್ಟ್ 18 ರಂದು ಕೊನೆಗೊಳ್ಳಲಿದೆ. ಇನ್ನಿಬ್ಬರು ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಇನ್ನೂ ಘೋಷಿಸಿಲ್ಲ. ನಾಮಪತ್ರ ಸಲ್ಲಿಸಲು ಜು.13 ಕೊನೆಯ ದಿನ. ಜು.17 ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಬಹುದು. ಜು.24 ರಂದು ಮತದಾನ ನಡೆಯಲಿದೆ.

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜೈಶಂಕರ್ ಅವರು "ಮೊದಲನೆಯದಾಗಿ ನಾನು ಪ್ರಧಾನಿ ಮೋದಿ, ಬಿಜೆಪಿ ನಾಯಕತ್ವ ಮತ್ತು ಗುಜರಾತ್‌ನ ಜನರು ಮತ್ತು ಶಾಸಕರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದರು. ರಾಜ್ಯಸಭೆಯಲ್ಲಿ ಗುಜರಾತ್ ಅನ್ನು ಪ್ರತಿನಿಧಿಸಲು ನಾಲ್ಕು ವರ್ಷಗಳ ಹಿಂದೆ ನಾನು ಈ ಗೌರವವನ್ನು ಸ್ವೀಕರಿಸಿದ್ದೆ. ಕಳೆದ 4 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶದಲ್ಲಿ ಆಗಿರುವ ಬದಲಾವಣೆಗಳ ಭಾಗವಾಗಲು ನಾನು ಅವಕಾಶವನ್ನು ಪಡೆದುಕೊಂಡಿದ್ದೇನೆ. ಮುಂಬರುವ 4 ವರ್ಷಗಳು ಮತ್ತೆ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಭಾರತದ ಚುನಾವಣಾ ಆಯೋಗ(ಇಸಿಐ) ಗೋವಾ, ಗುಜರಾತ್ ಮತ್ತು ಪಶ್ಚಿಮ ಬಂಗಾಳದ 10 ರಾಜ್ಯಸಭಾ ಸ್ಥಾನಗಳಿಗೆ ಜುಲೈ 24 ರಂದು ನಡೆಯಲಿರುವ ಚುನಾವಣೆಯ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸಿದೆ. ಈ ರಾಜ್ಯಗಳ 10 ಸದಸ್ಯರ ಅವಧಿ ಜುಲೈ ಮತ್ತು ಆಗಸ್ಟ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಜೈಶಂಕರ್ ಅವರು 2019 ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.   

ಇದನ್ನೂ ಓದಿ: ಗುಜರಾತ್​ನ 3 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಇಂದು ಎಸ್.ಜೈಶಂಕರ್ ನಾಮಪತ್ರ ಸಲ್ಲಿಕೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.