ಕೊಪ್ಪಳದಲ್ಲಿ ನಿವೃತ್ತ ಯೋಧನಿಗೆ ಆತ್ಮೀಯ ಸ್ವಾಗತ; ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ- ವಿಡಿಯೋ
🎬 Watch Now: Feature Video
ಕೊಪ್ಪಳ : ಸೇನೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ನಗರಕ್ಕೆ ಆಗಮಿಸಿದ ಯೋಧ ನಾಗಬಸಯ್ಯ ಹಿರೇಮಠ ಅವರಿಗೆ ಮಂಗಳವಾರ ಇಲ್ಲಿನ ಗೆಳೆಯರ ಬಳಗದ ಸದಸ್ಯರು ಮತ್ತು ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತ ಕೋರಿದರು. ಕೊಪ್ಪಳ ತಾಲೂಕಿನ ಗುಡಗೇರಿ ಗ್ರಾಮದ ನಿವಾಸಿಯಾಗಿರುವ ನಾಗಬಸಯ್ಯ ಹಿರೇಮಠ ಅವರು, 2000ನೇ ಇಸವಿಯಲ್ಲಿ ಬಿಎಸ್ಎಫ್ಗೆ ಸೇರಿದ್ದರು.
ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ತ್ರಿಪುರ, ಛತ್ತೀಸ್ಗಡ, ಇಂದೋರ್ ಮುಂತಾದೆಡೆ ಸೇವೆ ಸಲ್ಲಿಸಿ ಹವಾಲ್ದಾರ್ ಆಗಿ ಬಡ್ತಿ ಹೊಂದಿ 2023 ಆಗಸ್ಟ್ನಲ್ಲಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ಇಂದು ತನ್ನ ಸ್ವಗ್ರಾಮಕ್ಕೆ ಆಗಮಿಸಿದ ನಾಗಬಸಯ್ಯರನ್ನು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ದಾರಿಯುದ್ಧಕ್ಕೂ ಜನರು ನಾಗಬಸಯ್ಯ ಅವರಿಗೆ ಶುಭಾಶಯ ಕೋರಿದರು. ನಾಗಬಸಯ್ಯ ಹಾಗೂ ದೇಶದ ಪರ ಘೋಷಣೆ ಕೂಗಿದರು. ಪೊಲೀಸರು ನಾಗಬಸಯ್ಯರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.
"ದೇಶಕ್ಕಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಜಿಲ್ಲೆ ಮತ್ತು ಗ್ರಾಮದ ಜನರು ನನ್ನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದು, ಅತೀವ ಸಂತಸ ತಂದಿದೆ. ಸೇನೆಯಲ್ಲಿದ್ದಾಗ ಆಗಿರುವ ನೋವುಗಳು ಇಂದು ಇವರನ್ನೆಲ್ಲ ಮತ್ತೆ ನೋಡಿದಾಗ ಮರೆಯಾಯಿತು. ನನಗೆ ಸಿಕ್ಕ ಈ ಗೌರವ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಯೋಧನಿಗೂ ದೊರೆಯಬೇಕು. ಅವರೆಲ್ಲರ ಸೇವೆ ಅತ್ಯಮೂಲ್ಯವಾದದ್ದು" ಎಂದು ನಿವೃತ್ತ ಯೋಧ ನಾಗಬಸಯ್ಯ ಸಂತಸ ಹಂಚಿಕೊಂಡರು.
ಇದನ್ನೂ ಓದಿ : Soldier Missing: ರಜೆಯ ಮೇಲಿದ್ದ ಭಾರತೀಯ ಯೋಧ ನಾಪತ್ತೆ; ಭದ್ರತಾ ಸಿಬ್ಬಂದಿಯಿಂದ ಶೋಧ