ಕುಕ್ಕೆ ಸುಬ್ರಮಣ್ಯನ ದರ್ಶನ ಪಡೆದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌.. - ಶ್ರೀ ಕ್ಷೇತ್ರ ಧರ್ಮಸ್ಥಳ

🎬 Watch Now: Feature Video

thumbnail

By

Published : Feb 14, 2023, 10:56 PM IST

ಸುಬ್ರಮಣ್ಯ: ಕರ್ನಾಟಕ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಮಂಗಳವಾರ ಮತ್ತು ಬುಧವಾರ ಕರಾವಳಿಯ ತೀರ್ಥಕ್ಷೇತ್ರಗಳ ದರ್ಶನ ಮಾಡಲಿದ್ದು, ಇಂದು ಅವರು ಕುಟುಂಬಸ್ಥರೊಂದಿಗೆ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ ಕುಕ್ಕೆ ಸುಬ್ರಮಣ್ಯ ದೇವರ ದರ್ಶನ ಪಡೆದರು.

ಮಂಗಳವಾರ ಪೂರ್ವಾಹ್ನ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಟ ಅವರು ಮಧ್ಯಾಹ್ನ ಸುಮಾರು 2:30 ಗಂಟೆಗೆ ಮೂಡಿಗೆರೆ ಅತಿಥಿ ಗೃಹಕ್ಕೆ ಆಗಮಿಸಿ, ಆ ಬಳಿಕ ಅಪರಾಹ್ನ 5.45 ರ ಸುಮಾರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಬಂದು ದೇವರ ದರ್ಶನ ಪಡೆದರು. ಮುಂದಕ್ಕೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ರಾತ್ರಿ ಧರ್ಮಸ್ಥಳದಲ್ಲಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವ ರಾಜ್ಯಪಾಲರು ನಾಳೆ ಬುಧವಾರ ಬೆಳಗ್ಗೆ ದೇವರ ದರ್ಶನದ ಬಳಿಕ ಇಲ್ಲಿನ ಅಮೃತ ವರ್ಷಿಣಿ ಸಭಾಭವನದಲ್ಲಿ ನಡೆಯಲಿರುವ ನವಜೀವನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಪರಾಹ್ನ 3: 00 ಗಂಟೆಗಳ ಸುಮಾರಿಗೆ ಧರ್ಮಸ್ಥಳದಿಂದ ಹೊರಟು ರಾತ್ರಿ ಕುದುರೆಮುಖದಲ್ಲಿ ಅತಿಥಿ ಗೃಹದಲ್ಲಿ ಅವರು ತಂಗಲಿದ್ದಾರೆ. 

ಇದನ್ನೂ ಓದಿ : ವಿಧಾನಸಭೆಯಲ್ಲಿ ಅಧಿಕಾರಿಗಳ ಗೈರು: ಅಧಿಕಾರಿಗಳೇನು ದೇವಲೋಕದವರಾ? - ಸಿದ್ದರಾಮಯ್ಯ ಕಿಡಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.