ಚಿನ್ನದ ಕನ್ನಡಕ, ಮೊಬೈಲ್ ಕವರ್.. ಈ 'ಬಂಗಾರದ ಮನುಷ್ಯ' ಎಷ್ಟು ಕೆಜಿ ಚಿನ್ನ ಧರಿಸುವವರು ಗೊತ್ತೇ? - ಬಂಗಾರದ ಮೇಲೆ ಆಸಕ್ತಿ

🎬 Watch Now: Feature Video

thumbnail

By ETV Bharat Karnataka Team

Published : Oct 19, 2023, 2:30 PM IST

ಅನೇಕ ಜನರು ಚಿನ್ನವನ್ನು ಇಷ್ಟಪಡುತ್ತಾರೆ. ಹೆಚ್ಚಾಗಿ ಮಹಿಳೆಯರು ಹಳದಿಲೋಹವನ್ನು ಧರಿಸಲು ಆಸಕ್ತಿ ಹೊಂದಿರುತ್ತಾರೆ. ಬಿಹಾರ ಮೂಲದ ಪ್ರೇಮ್ ಸಿಂಗ್ ಎಂಬ ವ್ಯಕ್ತಿ ಕೊರಳಲ್ಲಿ 30ಕ್ಕೂ ಹೆಚ್ಚು ಸರಗಳು, ಕೈಬೆರಳಿಗೆ ಹತ್ತು ಉಂಗುರಗಳನ್ನು ಹಾಕಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೋದಲ್ಲೆಲ್ಲಾ 5 ಕೆಜಿ 200 ಗ್ರಾಂ ತೂಕದ ಈ ಚಿನ್ನದ ಆಭರಣಗಳನ್ನು ಧರಿಸುತ್ತಾರೆ.  

ಭೋಜ್‌ಪುರದವರಾದ ಪ್ರೇಮ್ ಸಿಂಗ್ ಅವರಿಗೆ ಬಾಲ್ಯದಿಂದಲೂ ಚಿನ್ನದ ಮೇಲೆ ಹೆಚ್ಚು ಆಸಕ್ತಿ. ಅವರ ಈ ಉತ್ಸಾಹ ಕ್ರಮೇಣ ಹೆಚ್ಚಾಗಿದೆ. ಈಗ ಅವರು ತಮ್ಮ ದೇಹದ ಮೇಲೆ 5 ಕೆಜಿ 200 ಗ್ರಾಂ ಚಿನ್ನವನ್ನು ಧರಿಸುತ್ತಾರೆ. ಸದ್ಯ ಪ್ರೇಮ್​ಸಿಂಗ್ ಬಳಸುತ್ತಿರುವ ಕನ್ನಡಕ, ಮೊಬೈಲ್ ಕವರ್ ಮುಂತಾದ ಬಹುತೇಕ ವಸ್ತುಗಳು ಚಿನ್ನದಿಂದ ಮಾಡಿರುವುದು ಗಮನಾರ್ಹ. ಈ ಒಂದು ವಿಷಯ ಸಾಕು ಅವರಿಗೆ ಬಂಗಾರ ಅಂದ್ರೆ ಎಷ್ಟು ಇಷ್ಟ ಅನ್ನೋದಕ್ಕೆ.

''ಜಮೀನುದಾರರ ಕುಟುಂಬದಲ್ಲಿ ನನ್ನ ಜನನ. ಚಿಕ್ಕವಯಸ್ಸಿನಿಂದಲೂ ಬಂಗಾರದ ಮೇಲೆ ಆಸಕ್ತಿ ಇದೆ. ಸದ್ಯ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದೇನೆ. ಆದಾಯದಲ್ಲಿ ಬಂದ ಲಾಭವನ್ನು ಬಂಗಾರದ ಆಭರಣಗಳನ್ನು ಖರೀದಿಸುತ್ತಿದ್ದೇನೆ. ನನ್ನ ಬಳಿ ಕೇವಲ ಎರಡು ಕಿಲೋ ಚಿನ್ನವಿತ್ತು. 2022ರ ವರೆಗೆ ಕ್ರಮೇಣ ಹಳದಿ ಆಭರಣಗಳನ್ನು ತೊಡುವ ಆಸಕ್ತಿ ಹೆಚ್ಚಾಯಿತು.. ಸದ್ಯ ನನ್ನ ಬಳಿ 5 ಕೆಜಿ 200 ಗ್ರಾಂ ಚಿನ್ನಾಭರಣವಿದೆ. ಭಾರತದ ಬಂಗಾರದ ಮನುಷ್ಯ ಆಗುವುದೇ ನನ್ನ ಗುರಿ. ನಾನು ವಿವಿಧ ಕಾರ್ಯಕ್ರಮಗಳಿಗೆ ಹೋದಾಗ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಆಗ ಖುಷಿ ಸಿಗುತ್ತದೆ ಎನ್ನುತ್ತಾರೆ ಪ್ರೇಮ್​ಸಿಂಗ್​.

ಚಿನ್ನಾಭರಣ ಧರಿಸಿದ್ದ ನನಗೆ ಯಾವುದೇ ಭದ್ರತಾ ಸಮಸ್ಯೆ ಎದುರಾಗಿಲ್ಲ. ಹೊರಗೆ ಹೋಗುವಾಗ ಜೊತೆಯಲ್ಲಿ ಇಬ್ಬರು ಸೆಕ್ಯುರಿಟಿ ಸಿಬ್ಬಂದಿ ಇರುತ್ತಾರೆ.. ಅವರು ನನ್ನ ಸುರಕ್ಷತೆಯನ್ನು ನೋಡಿಕೊಳ್ಳುತ್ತಾರೆ. ಈ ಚಿನ್ನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಪ್ರೇಮ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಓದಿ: gold World Cup trophy: ಕೇವಲ 0.9 ಗ್ರಾಂ ಚಿನ್ನದಲ್ಲಿ ವಿಶ್ವಕಪ್ ಟ್ರೋಫಿಯ​ ಮಾದರಿ ತಯಾರಿಸಿದ ಅಕ್ಕಸಾಲಿಗ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.