ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಗ್ಯಾಂಗ್ ವಾರ್: ಹನೂರಲ್ಲಿ ಕೋತಿಗಳ ನಡುವೆ ಕಾಳಗ - ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಗ್ಯಾಂಗ್ ವಾರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15825659-thumbnail-3x2-nin.jpg)
ಚಾಮರಾಜನಗರ : ಏರಿಯಾ ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಕೋತಿಗಳ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಜಿಲ್ಲೆಯ ಹನೂರಿನ ಸಂತೇಪೇಟೆ ಬೀದಿಯಲ್ಲಿ ಈ ಘಟನೆ ನಡೆದಿದೆ. ಹನುಮ ನೆಲೆಸಿದ ನೆಲೆಬೀಡಾದ ಹನೂರಿನಲ್ಲಿ (ಹನುಮಪುರಿ) ಸಾವಿರಾರು ವಾನರಗಳು ನೆಲೆಸಿದ್ದು, ಪ್ರತಿ ಬಡಾವಣೆಯಲ್ಲಿ ತನ್ನದೇಯಾದ ಬಳಗವನ್ನು ಹೊಂದಿವೆ. ಒಂದು ಬಡಾವಣೆಯಲ್ಲಿರುವ ಕೋತಿಗಳು ಇನ್ನೊಂದು ಬೀದಿಗೆ ಲಗ್ಗೆ ಹಾಕಲು ಮೂಲ ನಿವಾಸಿ ಕೋತಿಗಳ ಸೈನ್ಯ ಬಿಡುವುದಿಲ್ಲ. ಆದರೆ, ಪಟ್ಟಣದ ಆಂಜನೇಯ ಬಡಾವಣೆಯಲ್ಲಿರುವ ಸುಮಾರು 15ಕ್ಕೂ ಹೆಚ್ಚು ಕೋತಿಗಳ ಹಿಂಡು ಸಂತೆಪೇಟೆ ಬೀದಿಗೆ ಲಗ್ಗೆ ಇಟ್ಟಿದ್ದವು. ಇದರಿಂದ ರೊಚ್ಚಿಗೆದ್ದ ವಿರೋಧಿ ಕೋತಿಗಳ ಗುಂಪುಗಳು ಜಗಳಕ್ಕಿಳಿದಿವೆ.
Last Updated : Feb 3, 2023, 8:24 PM IST
TAGGED:
ಹನೂರಲ್ಲಿ ಕೋತಿಗಳ ನಡುವೆ ಗಲಾಟೆ