ಗಂದೇರ್ಬಾಲ್: ಮೇಘಸ್ಫೋಟಕ್ಕೆ ಹಲವಾರು ಮನೆಗಳು, ಮಸೀದಿಗೆ ಹಾನಿ - ಮೇಘಸ್ಫೋಟ
🎬 Watch Now: Feature Video
ಶ್ರೀನಗರ( ಜಮ್ಮು ಮತ್ತು ಕಾಶ್ಮೀರ): ರಾಜ್ಯದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಹಲವಡೆ ಹಾನಿ ಸಂಭವಿಸುತ್ತಿದೆ. ಶನಿವಾರ ನಸುಕಿನ ಹೊತ್ತಲ್ಲಿ ಮಧ್ಯ ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಗುಜರ್ ಪತಿ ಪ್ರಾಂಗ್ನಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಹಲವಾರು ಮನೆಗಳು, ಶಾಲೆ ಹಾಗೂ ಮಸೀದಿಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಭಾರೀ ಮಳೆಯ ನಂತರ ಗುಜರ್ ಪತಿ ಪ್ರಾಂಗ್ ಪ್ರದೇಶಕ್ಕೆ ಮೇಘಸ್ಫೋಟ ಅಪ್ಪಳಿಸಿದ್ದು, ಇದರಿಂದಾಗಿ ಇಲ್ಲಿನ ಜನ ತತ್ತರಿಸಿ ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯಲ್ಲಿ ಹಲವಾರು ವಸತಿ ಗೃಹಗಳು, ಸರ್ಕಾರಿ ಶಾಲೆ ಮತ್ತು ಮಸೀದಿಯೊಳಗೆ ನೀರು ನುಗ್ಗಿದ್ದು, ಕಟ್ಟಡಗಳಿಗೆ ಮಾತ್ರವಲ್ಲದೇ ಒಳಗಿದ್ದ ಪೀಠೋಪಕರಣಗಳಗೂ ಹಾನಿಯಾಗಿದೆ ಎಂದು ಅವರು ಹೇಳಿದರು. ಎಸ್‌ಡಿಎಂ ಮತ್ತು ತಹಸೀಲ್ದಾರ್ ಕಂಗನ್, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ, ಪ್ರವಾಹ, ಭೂಕುಸಿತಗಳಂತಹ ಘಟನೆಗಳು ವರದಿಯಾಗುತ್ತಲೇ ಇವೆ. ಇಂದು ಬೆಳಗ್ಗೆ ಅರುಣಾಚಲ ಪ್ರದೇಶದ ಎನ್ಎಚ್ ಒಂದರಲ್ಲಿ ಭೂಕುಸಿತ ಉಂಟಾಗಿ ರಸ್ತೆಯಲ್ಲಿದ್ದ ಕಾರೊಂದು ಕೆಸರು ಮಣ್ಣಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿತ್ತು.
ಇದನ್ನೂ ನೋಡಿ: ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಕೆಸರು ಮಣ್ಣಿನ ಜೊತೆ ಕೊಚ್ಚಿ ಹೋದ ಕಾರು.. ವಿಡಿಯೋ