ಮಳೆ ಆರ್ಭಟಕ್ಕೆ ಜಲಾವೃತವಾದ ಯಲ್ಲಮ್ಮ ದೇವಸ್ಥಾನ
🎬 Watch Now: Feature Video
ಮಳೆ ಅವಾಂತರಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲ್ಲಮ್ಮವಾಡಿ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ. ಕಳೆದ ರಾತ್ರಿ ಮಹಾರಾಷ್ಟ್ರ ಹಾಗೂ ಗಡಿ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ದೇವಸ್ಥಾನದ ಒಳಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನ ಮಧ್ಯದಲ್ಲಿ ಶಕ್ತಿ ದೇವತೆಗೆ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ನೀರಿನಲ್ಲಿ ಅಲ್ಪ ಪ್ರಮಾಣದ ಒಳಹರಿವು ಇರುವುದರಿಂದ ಭಕ್ತರು ದೂರದಿಂದಲೇ ದೇವಿ ದರ್ಶನ ಪಡೆದುಕೊಂಡರು.
Last Updated : Feb 3, 2023, 8:27 PM IST