ಬೆಂಕಿ ಅವಘಡದಿಂದ ಹೊತ್ತಿ ಉರಿದ ರೆಸಾರ್ಟ್: ಅಪಾರ ಹಾನಿ - 8 ಕೊಠಡಿಗಳು ಸಂಪೂರ್ಣ ಬೆಂಕಿಗೆ ಆಹುತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/04-09-2023/640-480-19430192-thumbnail-16x9-yyy.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 4, 2023, 10:16 PM IST
ಗಂಗಾವತಿ(ಕೊಪ್ಪಳ) : ಬೆಂಕಿ ಅವಘಡದಿಂದ ರೆಸಾರ್ಟ್ವೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಹನುಮನಹಳ್ಳಿ ಗ್ರಾಮದ ಋಷಿಮುಖ ಪರ್ವತದ ರಸ್ತೆಯಲ್ಲಿರುವ ವಂಡರ್ಲಸ್ಟ್ ರೆಸಾರ್ಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರೆಸಾರ್ಟ್ನ 10 ಕೊಠಡಿಗಳ ಪೈಕಿ ಎಂದು 8 ಕೊಠಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ರೆಸಾರ್ಟ್ ಪೂರ್ತಿ ಆವರಿಸಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಬೆಂಕಿ ಅವಘಡ ಹೇಗೆ ಸಂಭವಿಸಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ರೆಸಾರ್ಟ್ನಲ್ಲಿ ಕಿರುಚಿತ್ರ ನಿರ್ಮಾಣ ತಂಡವೊಂದು ಬೀಡು ಬಿಟ್ಟಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ : ಸರೋಜಿನಿ ಬಾಬು ಮಾರ್ಕೆಟ್ನಲ್ಲಿ ಬೆಂಕಿ ಅವಘಡ : ನಾಲ್ಕು ಗಾರ್ಮೆಂಟ್ಸ್ ಅಂಗಡಿಗಳು ಬೆಂಕಿಗಾಹುತಿ
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಆನೆಗೊಂದಿ ಭಾಗದಲ್ಲಿ ಬೆರಳೆಣಿಕೆಯಷ್ಟು ರೆಸಾರ್ಟ್ಗಳು ಮಾತ್ರ ಕಾರ್ಯಾಚರಣೆ ಮಾಡುತ್ತಿದೆ. ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಬಹುತೇಕ ರೆಸಾರ್ಟ್ಗಳನ್ನು ಬಿದಿರು ಸೇರಿದಂತೆ ನೈಸರ್ಗಿಕ ವಸ್ತುಗಳಿಂದಲೇ ನಿರ್ಮಾಣ ಮಾಡಲಾಗಿದೆ. ಈ ರೆಸಾರ್ಟ್ ಕೂಡ ಬಿದಿರಿನಿಂದ ನಿರ್ಮಾಣ ಮಾಡಲಾಗಿತ್ತು.
ಇದನ್ನೂ ಓದಿ : ಭಾರಿ ಅಗ್ನಿ ಅವಘಡ.. ನಾಲ್ವರು ಸಾವು, ಬೆಂಕಿ ನಂದಿಸಲು ಹರಸಾಹಸ