ದಾವಣಗೆರೆಯಲ್ಲಿ ಆಸ್ತಿ ವಿಚಾರಕ್ಕೆ ಸಹೋದರರ ಗಲಾಟೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ದಾವಣಗೆರೆ ತಾಲೂಕಿನ ಮೆಳ್ಳೇಕಟ್ಟೆ ಗ್ರಾಮ
🎬 Watch Now: Feature Video
ದಾವಣಗೆರೆ : ಆಸ್ತಿ ವಿಚಾರಕ್ಕೆ ಒಡಹುಟ್ಟಿದ ಅಣ್ಣ-ತಮ್ಮಂದಿರು ರಸ್ತೆಯಲ್ಲೇ ಗಲಾಟೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಮೆಳ್ಳೇಕಟ್ಟೆ ಗ್ರಾಮದಲ್ಲಿ ನಡೆದಿದೆ. ಮೆಳ್ಳೇಕಟ್ಟೆ ಗ್ರಾಮದ ನಿವಾಸಿಗಳಾದ ಸಿದ್ದೇಶ್ ಹಾಗೂ ಮಲ್ಲಿಕಾರ್ಜುನ ನಡುವೆ ಸಂಘರ್ಷ ಉಂಟಾಗಿದೆ. ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ದಾಖಲಾಗಿದೆ.
ತಾಯಿ ಹೆಸರಿನಲ್ಲಿರುವ ಅಡಿಕೆ ತೋಟವನ್ನು ತನ್ನ ಹೆಸರಿಗೆ ಮಾಡುವಂತೆ ಅಣ್ಣ ಸಿದ್ದೇಶ್, ತಮ್ಮ ಮಲ್ಲಿಕಾರ್ಜುನ್ ಮನೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಈ ವೇಳೆ ಸಿದ್ದೇಶ್ ರಾಡ್ನಿಂದ ಸಹೋದರ ಮಲ್ಲಿಕಾರ್ಜುನ್ಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ ರಸ್ತೆ ಬದಿ ನಿಲ್ಲಿಸಿದ್ದ ಮಲ್ಲಿಕಾರ್ಜುನ್ ಅವರ ಕಾರಿನ ಗ್ಲಾಸು ಒಡೆದು ಹಾಕಿದ್ದಾರೆ. ಬಳಿಕ ಕಾರಿಗೆ ಬೆಂಕಿ ಇಟ್ಟಿದ್ದು, ಭಾಗಶಃ ಸುಟ್ಟು ಕರಕಲಾಗಿದೆ.
ಸಿದ್ದೇಶ್ ಅವರು ಮಲ್ಲಿಕಾರ್ಜುನ್ ಕುಟುಂಬಸ್ಥರ ಮೇಲೂ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೋಲಿಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : 6 ತಿಂಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸರು