BJP workers clash: ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರ ಗಲಾಟೆ - ಪ್ರಧಾನಿ ಮೋದಿ ಭಾಷಣ

🎬 Watch Now: Feature Video

thumbnail

By

Published : Jun 27, 2023, 10:10 PM IST

ಡೆಹ್ರಾಡೂನ್ (ಉತ್ತರಾಖಂಡ್): ಬಿಜೆಪಿಯ ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದಲ್ಲಿ ಕೆಲ ಯುವಕರು ಸಾಕಷ್ಟು ಕೋಲಾಹಲ ಉಂಟಾದ ಘಟನೆ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‌ನಲ್ಲಿ ನಡೆದಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಯುವ ಕಾರ್ಯಕರ್ತರು ಯುವಕನೊಬ್ಬನಿಗೆ ತೀವ್ರವಾಗಿ ಥಳಿಸಿದ್ದಾರೆ.

ಮಂಗಳವಾರ ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಈ ಕಾರ್ಯಕ್ರಮದ ಬಗ್ಗೆ ಡೆಹ್ರಾಡೂನ್‌ನಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ಇದೇ ವೇಳೆ, ಕಾರ್ಯಕ್ರಮ ಆಯೋಜಿಸಿದ್ದ ಸಭಾಂಗಣದೊಳಗೆ ಬಿಜೆಪಿ ಯುವ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಪರಸ್ಪರ ಗುದ್ದಾಟ ನಡೆಸಿ ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. 

ಇದನ್ನೂ ಓದಿ: ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ ತ್ರಿವಳಿ ತಲಾಖ್ ಕಾನೂನು ಪದ್ಧತಿ ಇಲ್ಲ: ಪ್ರಧಾನಿ ಮೋದಿ

ಮತ್ತೊಂದೆಡೆ, ಥಳಿತಕ್ಕೆ ಒಳಗಾಗುತ್ತಿದ್ದ ಯುವಕನನ್ನು ಪಕ್ಷದ ಮಹಿಳಾ ನಾಯಕಿಯೊಬ್ಬರು ರಕ್ಷಿಸಿದ್ದಾರೆ. ಆ ಯುವಕನನ್ನು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಬಂದು ಯುವಕರ ಹಲ್ಲೆಯಿಂದ ಬಚಾವ್​ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಖುದ್ದು ಮುಖ್ಯಮಂತ್ರಿಗಳೇ ಪಾಲ್ಗೊಂಡಿದ್ದರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಅಲ್ಲದೇ, ಸಿಎಂ ಧಾಮಿ ಅವರೇ ಸ್ಥಳದಲ್ಲಿದ್ದರು. ಇದೇ ಸಂದಭದಲ್ಲೇ ಈ ಘಟನೆ ನಡೆದಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: Bihar crime: ಮಾಜಿ ಡಿಸಿಎಂ ಕಾರ್ಯಕ್ರಮದಲ್ಲಿ ಹಣ ವಿಚಾರವಾಗಿ ಬಿಜೆಪಿ ಮುಖಂಡನಿಂದ ಗುಂಡಿನ ದಾಳಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.