ಕೋಲಾರದಲ್ಲಿ ರಾಜೀ ಸಭೆಯಲ್ಲಿ ಮಾರಾಮಾರಿ: ಪೊಲೀಸರ ಎದುರೇ ಹೊಡೆದಾಡಿಕೊಂಡ ಗ್ರಾಮಸ್ಥರು - ಕೋಲಾರ ತಾಲೂಕಿನ ದಾನವಹಳ್ಳಿ ಗ್ರಾಮ
🎬 Watch Now: Feature Video
ಕೋಲಾರ: ಹಳೇ ದ್ವೇಷದ ಹಿನ್ನೆಲೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಪೊಲೀಸರ ಎದುರೇ ಹೊಡೆದಾಡಿಕೊಂಡ ಘಟನೆ ಕೋಲಾರ ತಾಲೂಕಿನ ದಾನವಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ಇದೆ. ಸರ್ಕಾರದ ವತಿಯಿಂದ ಕೆಲವರು ಪರವಾನಗಿ ಪಡೆದುಕೊಂಡಿದ್ದು, ಇನ್ನು ಕೆಲವರಿಗೆ ಪರವಾನಗಿ ಸಿಗದ ಕಾರಣ ಎರಡು ಗುಂಪುಗಳ ನಡುವೆ ವೈಷಮ್ಯ ಉಂಟಾಗಿತ್ತು. ಈ ಮಧ್ಯೆ ಗ್ರಾಮದಲ್ಲಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ದೇವರ ಉತ್ಸವ ತಮ್ಮ ಬೀದಿಗಳಲ್ಲಿ ಬರಲಿಲ್ಲ ಎಂದು ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಸಮಸ್ಯೆ ಬಗೆಹರಿಸಲು ಹಿರಿಯರು ಮಾತುಕತೆಗೆ ಕರೆದಿದ್ರು. ಪೊಲೀಸರು ಕೂಡ ಆಗಮಿಸಿದ್ದರು. ಈ ವೇಳೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ಉಂಟಾಗಿದೆ. ಇಟ್ಟಿಗೆ, ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:29 PM IST