ದೊಡ್ಡಬಳ್ಳಾಪುರ: ಹಸುಗಳ ಮೈ ತೊಳೆಯಲು ಹೋದ ರೈತ ನೀರಿನಲ್ಲಿ ಮುಳುಗಿ ಸಾವು - Farmer drowned in water
🎬 Watch Now: Feature Video
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 11, 2023, 3:30 PM IST
ದೊಡ್ಡಬಳ್ಳಾಪುರ: ಹಸುಗಳ ಮೈ ತೊಳೆಯಲು ನೀರಿಗಿಳಿದ ರೈತ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಒಡೆಯರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ನಡೆದಿದೆ. ರಾಮಪುರ ಗ್ರಾಮದ ಕುಮಾರ್ (43) ಮೃತ ದುರ್ದೈವಿ. ಮಂಗಳವಾರ ಈ ಘಟನೆ ನಡೆದಿದೆ. ಇಂದು ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶವ ಹೊರ ತೆಗೆದರು.
ಕುಮಾರ್ ನಿನ್ನೆ ಆರು ದನಗಳ ಮೈ ತೊಳೆಯಲು ಜಾಲಿಕಟ್ಟೆಗೆ ಹೋಗಿದ್ದರು. ಆದರೆ, ಸಂಜೆಯಾದರೂ ಅವರು ಮನೆಗೆ ಬಂದಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಜಾಲಿಕಟ್ಟೆ ಬಳಿ ಬಂದು ನೋಡಿದಾಗ ಚಪ್ಪಲಿ ಕಂಡು ಬಂದಿದ್ದವು. ಆತಂಕಗೊಂಡ ಕುಟುಂಬಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ರಾತ್ರಿಯಾದ ಕಾರಣ ಶೋಧ ಕಾರ್ಯ ನಡೆಸಿರಲಿಲ್ಲ. ಇಂದು ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಬೋಟ್ಗಳ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ಅಜ್ಜಿಯ ತಿಥಿಗೆ ಬಂದಿದ್ದ ಕುಟುಂಬಸ್ಥರು.. ನಾಲೆಯಲ್ಲಿ ಮುಳುಗಿ ಅಪ್ಪ, ಅಮ್ಮ, ಮಗಳು ಸಾವು