ಪ್ರಿಯಾಂಕ್ ಖರ್ಗೆ ಗೆಲುವಿಗಾಗಿ ಅಭಿಮಾನಿಗಳ ದೀಡ್ ನಮಸ್ಕಾರ - Congress candidate Priyank Kharge
🎬 Watch Now: Feature Video
ಕಲಬುರಗಿ : ವಿಧಾನಸಭಾ ಚುನಾವಣೆಯ ಮತ ಏಣಿಕೆಗೆ ಕ್ಷಣಗಣನೆ ಅರಂಭವಾಗಿದ್ದು, ತಮ್ಮ ನೆಚ್ಚಿನ ನಾಯಕರ ಗೆಲುವಿಗಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಿಯಾಂಕ್ ಖರ್ಗೆ ಗೆಲವು ಸಾಧಿಸಲಿ ಎಂದು ಅಭಿಮಾಗಳು ಈ ಭಾಗದ ಸುಪ್ರಸಿದ್ಧ ದೇವತೆಯಾದ ಶ್ರೀ ನಾಗಾವಿ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿದ್ದು, ದೀಡ್ ನಮಸ್ಕಾರ ಹಾಕಿದ್ದಾರೆ.
ಇದನ್ನೂ ಓದಿ : ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ: ಡಿಸಿ ಸೆಲ್ವಮಣಿ
ಬಸವರಾಜ ಕಟಮಳ್ಳಿ ಹಾಗೂ ರಾಜು ಗಟ್ಟು ಎಂಬುವರು ದೀಡ್ ನಮಸ್ಕಾರ ಹಾಕಿದ್ದು, ಈ ಮೂಲಕ ಪ್ರಿಯಾಂಕ್ ಖರ್ಗೆ ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಎರಡು ಅವಧಿಗಳ ಕಾಲ ಶಾಸಕರಾಗಿ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಗೆಲುವು ಈ ಭಾಗದ ಅಭಿವೃದ್ಧಿಗೆ ಇನ್ನಷ್ಟು ಸಹಕಾರವಾಗಬೇಕಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಮತ್ತೆ ಗೆದ್ದು ಬರಬೇಕು ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಅಭಿಮಾನಿಗಳ ಮಾತಾಗಿದೆ.
ಇದನ್ನೂ ಓದಿ : ಕಾಂಗ್ರೆಸ್‌ನವರ ರೆಸಾರ್ಟ್ ರಾಜಕೀಯದ ಮಾತು ಹಾಸ್ಯಾಸ್ಪದ: ಬಿ.ಸಿ.ಪಾಟೀಲ್