‘ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಬೇಕೆಂಬುದು ನನ್ನ ಮನಸ್ಸಿನಲ್ಲಿತ್ತು‘: ಮುನ್ನಾ ಖುರೇಷಿ ಸಂದರ್ಶನ
🎬 Watch Now: Feature Video
ನವದೆಹಲಿ : ಉತ್ತರ ಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಮುನ್ನಾ ಖುರೇಷಿ ಅವರು ಈಟಿವಿ ಭಾರತ್ನೊಂದಿಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ್ದಾರೆ. 41 ಕಾರ್ಮಿಕರನ್ನು ಉಳಿಸಲು, ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಸುರಂಗದಿಂದ ಹೊರತರಬೇಕು ಎಂಬುದು ನನ್ನ ಮನಸ್ಸಿನಲ್ಲಿತ್ತು ಎಂದಿದ್ದಾರೆ.
ಪರಿಸ್ಥಿತಿಯನ್ನು ಅವಲೋಕಿಸಿದ ನಂತರ, ಎಲ್ಲಾ ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲು 24 ರಿಂದ 36 ಗಂಟೆಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಾವು ಕೇವಲ 26 ಗಂಟೆಗಳಲ್ಲಿ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಸುರಂಗದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರೆಲ್ಲ ಹೊರಬಂದಾಗ, ಎಲ್ಲರೂ ನನ್ನನ್ನು ತಬ್ಬಿ ಧನ್ಯವಾದ ಹೇಳಿದರು ಎಂದರು.
ಈ ತಂತ್ರದ ಬಗ್ಗೆ ನಮ್ಮ ವರದಿಗಾರರು ವಿಚಾರಿಸಿದಾಗ, ಈ ತಂತ್ರಕ್ಕೆ ಯಾವುದೇ ನಿಷೇಧವಿಲ್ಲ. ಆದರೆ, ಈ ತಂತ್ರದ ಮೂಲಕ ಜಲ ಮಂಡಳಿ ಮತ್ತು ಇತರ ಸಂಸ್ಥೆಗಳಲ್ಲಿ ಸಾಕಷ್ಟು ಕೆಲಸ ಮಾಡಲಾಗುತ್ತದೆ. ಈ ತಂತ್ರದಲ್ಲಿ ಯಂತ್ರಗಳನ್ನು ಬಳಸಲಾಗುವುದಿಲ್ಲ. ಆದರೆ ಸುರಂಗವನ್ನು ಕೈಯಿಂದ ಮತ್ತು ಸುತ್ತಿಗೆ ಉಳಿಯಿಂದ ಅಗೆಯಲಾಗುತ್ತದೆ ಎಂದು ಹೇಳಿದರು.
ಈಟಿವಿ ಭಾರತ್ ವರದಿಗಾರರು ಇಕ್ರಮ್ ಖುರೇಷಿ ಅವರೊಂದಿಗೆ ಮಾತನಾಡಿದ್ದರು. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ದಾರಿ ಮಾಡಿಕೊಟ್ಟ 12 ಜನರ ಪೈಕಿ 8 ಮಂದಿ ಇಕ್ರಂ ಖುರೇಷಿ ಪರ ಕೆಲಸ ಮಾಡಿದ್ದರು. ಈ ತಂತ್ರಕ್ಕೆ ಜಾಕ್-ಪುಶಿಂಗ್ ಅಥವಾ ಇಲಿ ತಳ್ಳುವುದು ಎಂದು ಕರೆಯಲಾಗುತ್ತದೆ. ಈ ತಂತ್ರದಲ್ಲಿ ಕೈಗಳಿಂದ ಸುರಂಗವನ್ನು ಅಗೆಯಲಾಗುತ್ತದೆ ಎಂದು ಇಕ್ರಮ್ ಖುರೇಷಿ ಹೇಳಿದ್ದಾರೆ.
ಇದನ್ನೂ ಓದಿ: ಸಿಲ್ಕ್ಯಾರಾ ಸುರಂಗದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಕಾರ್ಮಿಕ ಹೇಳಿದ್ದೇನು?..ಇಲ್ಲಿದೆ ವಿಡಿಯೋ