ಬಸ್, ಟ್ರಕ್ಗಳ ಅಡ್ಡಹಾಕಿ ಆಹಾರ ವಸೂಲಿ ಮಾಡುತ್ತಿರುವ ಗಜರಾಜ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Oct 3, 2023, 10:58 AM IST
ಮೇದಿನಿಪುರ (ಪಶ್ಚಿಮಬಂಗಾಳ): ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಆನೆಯೊಂದು ರಾಷ್ಟ್ರೀಯ ಹೆದ್ದಾರಿ ತಡೆದು ಮೇವು ಲೂಟಿ ಮಾಡಲು ಯತ್ನಿಸಿದೆ. ಆಹಾರ ಅರೆಸಿ ರಸ್ತೆಗೆ ಬಂದ ಆನೆ ಬಸ್, ಟ್ರಕ್ಗಳಿಗೆ ಅಡ್ಡಹಾಕಿ ಆಹಾರ ಹುಡುಕಿದೆ. ಆಹಾರ ಇಲ್ಲ ಎಂಬುದನ್ನು ಅರಿತು ಅವುಗಳನ್ನು ಬಿಟ್ಟು ಕಳುಹಿಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.
ಈ ಘಟನೆ ರಸ್ತೆ ಮೇಲೆ ನೆರದಿದ್ದ ಅನೇಕ ಜನರನ್ನು ಆಕರ್ಷಿಸಿತು. ಸ್ಥಳೀಯ ಗ್ರಾಮದಲ್ಲಿ ಸುತ್ತಾಡುವ ಈ ಆನೆ ಅಲ್ಲಿ ಗ್ರಾಮಸ್ಥರಿಗೂ ತುಂಬಾ ಅಚ್ಚುಮೆಚ್ಚು. ಅದನ್ನು ರಾಮಲಾಲ್ ಎಂದು ಕರೆಯುತ್ತಾರೆ. ಈ ಆನೆ ಆಗಾಗ ರಸ್ತೆ ಮೇಲೆ ಆಹಾರಕ್ಕಾಗಿ ವಾಹನಗಳನ್ನು ತಡೆಯುತ್ತದೆ. ಆಹಾರ ಸಿಗದಿದ್ದರೆ ಸುಮ್ಮನಾಗುತ್ತದೆ. ಗ್ರಾಮದಲ್ಲೂ ಆಹಾರ ಅರೆಸಿ ಬರುತ್ತದೆ. ಕೊಟ್ಟ ಆಹಾರವನ್ನು ತಿಂದು ಹಿಂತಿರುಗತ್ತದೆ.
ಈ ವರೆಗೂ ಇದು ಯಾರೊಬ್ಬರಿಗೂ ಹಾನಿಯನ್ನುಂಟು ಮಾಡಿಲ್ಲ. ತುಂಬಾ ಪ್ರೀತಿಯ ಆನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇತ್ತೀಚೆಗೆ ಚಾಮರಾಜನಗರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಆನೆಯೊಂದು ಕಬ್ಬಿನ ಲಾರಿ ಎಂದು ಸಾರಿಗೆ ಬಸ್ ಅನ್ನು ಅಡ್ಡಹಾಕಿತ್ತು. ಬಳಿಕ ಕಬ್ಬಿನ ಲಾರಿ ಅಲ್ಲ ಎಂದು ತಿಳಿದು ಬಸ್ ಅನ್ನು ಬಿಟ್ಟು ಕಳುಹಿಸಿತ್ತು.
ಇದನ್ನೂ ಓದಿ: ಚಾಮರಾಜನಗರ: ಕಬ್ಬಿನ ಲಾರಿ ಎಂದು ಬಸ್ ಅಡ್ಡಹಾಕಿದ ಗಜರಾಜ- ವಿಡಿಯೋ