ಲಿಫ್ಟ್ನಲ್ಲಿ ಸಿಕ್ಕಿಬಿದ್ದ ಎಂಟು ವರ್ಷದ ಬಾಲಕ.. ಸಿಸಿಟಿವಿ ದೃಶ್ಯ ವೈರಲ್ - 10 ನಿಮಿಷಗಳ ಕಾಲ ಲಿಫ್ಟ್ ಬಾಕಿ
🎬 Watch Now: Feature Video
ಟ್ಯೂಷನ್ ಮುಗಿಸಿ ಹಿಂತಿರುಗುತ್ತಿದ್ದ ಎಂಟು ವರ್ಷದ ಬಾಲಕನೋರ್ವ ಅಪಾರ್ಟ್ಮೆಂಟ್ ಕಟ್ಟಡದ ಲಿಫ್ಟ್ನಲ್ಲಿ ಸಿಲುಕಿಕೊಂಡಿರುವ ಘಟನೆ ಗ್ರೇಟರ್ ನೋಯ್ಡಾದ ನಿರಾಲಾ ಆಸ್ಪೈರ್ ಸೊಸೈಟಿಯಲ್ಲಿ ನಡೆದಿದೆ. ನಾಲ್ಕು ಮತ್ತು ಐದನೇ ಮಹಡಿಗಳ ನಡುವೆ 10 ನಿಮಿಷಗಳ ಕಾಲ ಲಿಫ್ಟ್ ಸ್ಟ್ರಕ್ ಆಗಿದ್ದು, ಅದರೊಳಗೆ ಸಿಲುಕಿಕೊಂಡ ವಿವಾನ್ ಎಂಬ ಬಾಲಕ ಸಹಾಯಕ್ಕಾಗಿ ಕೂಗುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ಸಮಯದಲ್ಲಿ ಸಿಸಿಟಿವಿ ಮಾನಿಟರ್ ಕೋಣೆಯಲ್ಲಿ ಭದ್ರತಾ ಅಧಿಕಾರಿ ಇಲ್ಲದೇ ಇದ್ದ ಕಾರಣ ಸುಮಾರು ಹೊತ್ತು ಮಗು ಲಿಫ್ಟ್ನಲ್ಲಿ ಒದ್ದಾಡುವಂತಾಗಿದೆ. ಬಹಳ ಸಮಯದ ನಂತರ ಮಗು ಲಿಫ್ಟ್ನಲ್ಲಿ ಸಿಕ್ಕಿಬಿದ್ದಿರುವುದನ್ನು ನೋಡಿದ ವ್ಯಕ್ತಿ ಇತರರ ಸಹಾಯದಿಂದ ಮಗುವನ್ನು ರಕ್ಷಿಸಿದ್ದಾರೆ.
Last Updated : Feb 3, 2023, 8:34 PM IST