ಎರಡು ದಿನಗಳ ಉತ್ತರಾಖಂಡ ಪ್ರವಾಸದಲ್ಲಿ ರಾಷ್ಟ್ರಪತಿ: ರಾಜಭವನದಲ್ಲಿ ನಕ್ಷತ್ರ ವಾಟಿಕಾ ಉದ್ಘಾಟಿಸಿದ ಮುರ್ಮು - ರಾಜ್ಯಪಾಲ ಗುರ್ಮೀತ್ ಸಿಂಗ್
🎬 Watch Now: Feature Video
ಉತ್ತರಾಖಂಡ: ರಾಷ್ಟ್ರಪತಿ ದ್ರೌಪದಿ ಮುರ್ಮು ಎರಡು ದಿನಗಳ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಇಂದು ರಾಜಭವನದಲ್ಲಿರುವ ರಾಜ್ ಪ್ರಜ್ಞೇಶ್ವರ ಮಹಾದೇವ ದೇವಸ್ಥಾನದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದಾರೆ. ಬಳಿಕ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ರಾಜ್ಯಪಾಲ ಗುರ್ಮೀತ್ ಸಿಂಗ್ ಉಪಸ್ಥಿತಿಯಲ್ಲಿ ರಾಜಭವನದಲ್ಲಿ ನಕ್ಷತ್ರ ವಾಟಿಕಾವನ್ನು ಉದ್ಘಾಟಿಸಿದರು.
ಪ್ರವಾಸದ ಮೊದಲನೆಯ ದಿನವಾದ ನಿನ್ನೆ 2001.94 ಕೋಟಿ ವೆಚ್ಚದ 9 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ಉತ್ತರಾಖಂಡದ ದೇವಭೂಮಿ, ತಪೋಭೂಮಿ ಮತ್ತು ವೀರಭೂಮಿಗೆ ಆಗಮಿಸಿದ್ದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಅಲ್ಲದೇ ಉತ್ತರಾಖಂಡ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಅವುಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಅಭಿವೃದ್ಧಿಪಡಿಸಬೇಕು ಎಂದು ಇದೇ ವೇಳೆ ಅವರು ಕರೆ ನೀಡಿದರು.
Last Updated : Feb 3, 2023, 8:35 PM IST