ETV Bharat / entertainment

'ನನಗೆ ಯಶಸ್ಸಿನ ಪಿತ್ತ ನೆತ್ತಿಗೇರಿತ್ತು, ಈಗ ಅರಿವಾಗಿದೆ': ರಾಮ್ ಗೋಪಾಲ್ ವರ್ಮಾ - RAM GOPAL VARMA

ಯಶಸ್ಸಿನ ಪಿತ್ತ ತಮ್ಮ ನೆತ್ತಿಗೇರಿತ್ತು ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.

ರಾಮ್ ಗೋಪಾಲ್ ವರ್ಮಾ
ರಾಮ್ ಗೋಪಾಲ್ ವರ್ಮಾ (ians)
author img

By ETV Bharat Karnataka Team

Published : Jan 20, 2025, 1:51 PM IST

ಚೆನ್ನೈ: ನಾನು ಈಗ ಎರಡು ದಿನಗಳ ಹಿಂದಿನವರೆಗೂ ಯಶಸ್ಸು ಮತ್ತು ಅಹಂಕಾರದ ಅಮಲಿನಲ್ಲಿ ತೂರಾಡುತ್ತಿದ್ದೆ ಎಂದು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ. "ನನಗೆ ಮದ್ಯದ ಅಮಲು ಏರಿರಲಿಲ್ಲ, ನನಗೆ ನನ್ನ ಸ್ವಂತದ ಯಶಸ್ಸು ಮತ್ತು ಅಹಂಕಾರದ ಅಮಲು ಏರಿತ್ತು. 27 ವರ್ಷಗಳ ನಂತರ ಎರಡು ದಿನಗಳ ಹಿಂದೆ ಇದೇ ಮೊದಲ ಬಾರಿಗೆ ನಾನೇ ತಯಾರಿಸಿದ 'ಸತ್ಯ' ಸಿನಿಮಾ ನೋಡುವವರೆಗೂ ನನಗೆ ಆ ಅಮಲು ಏರಿದ್ದು ಗೊತ್ತೇ ಆಗಿರಲಿಲ್ಲ" ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಈ ಕುರಿತಾಗಿ ಭಾವನಾತ್ಮಕ ಪೋಸ್ಟ್ ಮಾಡಿರುವ ಅವರು, ಸತ್ಯ ಚಿತ್ರ ನೋಡಿದ ನಂತರ ಅತ್ತಿರುವುದಾಗಿ ಹಾಗೂ ಚಿತ್ರದಲ್ಲಿರುವುದನ್ನು ನೋಡಿ ಅತ್ತಿದ್ದು ಮಾತ್ರವಲ್ಲದೇ ಅದರ ನಂತರ ಏನಾಯಿತು ಅದಕ್ಕಾಗಿಯೂ ಅತ್ತಿರುವುದಾಗಿ ವರ್ಮಾ ಹೇಳಿದ್ದಾರೆ.

27 ವರ್ಷಗಳ ಬಳಿಕ ಸತ್ಯ ಸಿನಿಮಾ ನೋಡಿದೆ: "27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸತ್ಯ ಸಿನಿಮಾ ನೋಡುತ್ತಿದ್ದೆ. ಸಿನಿಮಾ ಮುಗಿಯುತ್ತ ಬಂದಂತೆ ಕಣ್ಣೀರು ಸುರಿಯಲಾರಂಭಿಸಿದವು. ಚಿತ್ರ ನೋಡಿದ್ದಕ್ಕಾಗಿ ಮಾತ್ರ ಆ ಕಣ್ಣೀರು ಬಂದದ್ದಲ್ಲ. ಆದರೆ ಅಂದಿನಿಂದ ಇಂದಿನವರೆಗೆ ಏನಾಯಿತು ಎಂಬುದಕ್ಕೆ ಕಣ್ಣೀರು ಸುರಿಸಿದೆ" ಎಂದು ವರ್ಮಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ಧಾರೆ.

"ಚಲನಚಿತ್ರವನ್ನು ನಿರ್ಮಿಸುವುದೆಂದರೆ ಒಂದು ಮಗುವಿಗೆ ಜನ್ಮ ನೀಡಿದಂತೆ. ಆದರೆ ಜನಿಸುವ ಆ ಮಗು ಹೇಗಿರುತ್ತದೆ ಎಂಬುದು ಗೊತ್ತಿರುವುದಿಲ್ಲ. ಚಲನಚಿತ್ರವೊಂದನ್ನು ಸಣ್ಣ ಸಣ್ಣ ತುಂಡುಗಳಾಗಿ ನಿರ್ಮಿಸಲಾಗುತ್ತದೆ ಮತ್ತು ಅದು ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಚಿತ್ರದ ಬಗ್ಗೆ ಬೇರೆಯವರು ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ನಮ್ಮ ಗಮನ ಕೇಂದ್ರೀಕೃತವಾಗುತ್ತದೆ. ಚಿತ್ರ ಹಿಟ್ ಆಗಲಿ ಅಥವಾ ಆಗದಿರಲಿ ನಾನು ಎಂಥ ಅದ್ಭುತವೊಂದನ್ನು ರಚಿಸಿದ್ದೇನೆ ಎಂದು ಅರ್ಥ ಮಾಡಿಕೊಳ್ಳಲು ಮುಂದುವರಿಯುತ್ತೇನೆ." ಎಂದು ಅವರು ಹೇಳಿದ್ದಾರೆ.

ಆ ಚಿತ್ರದಲ್ಲಿನ ದುರಂತ ಅಂತ್ಯಕ್ಕಾಗಿ ನಾನು ಅಳಲಿಲ್ಲ: "ಸತ್ಯ ಚಿತ್ರದ ಪ್ರದರ್ಶನದ ನಂತರ ಹೋಟೆಲ್ ರೂಮಿಗೆ ಮರಳಿ ಬಂದು ಕತ್ತಲೆಯಲ್ಲಿ ಕುಳಿತಾಗ, ನಾನು ಎಷ್ಟೆಲ್ಲ ಬುದ್ಧಿವಂತನಾಗಿದ್ದರೂ ಭವಿಷ್ಯದಲ್ಲಿ ನಾನು ಏನು ಮಾಡಬೇಕೆಂದುಕೊಂಡಿದ್ದೇನೆ ಎಂಬುದಕ್ಕೆ ಸತ್ಯ ಚಿತ್ರವನ್ನು ಮಾನದಂಡವನ್ನಾಗಿ ಏಕೆ ಇಟ್ಟುಕೊಳ್ಳಲಿಲ್ಲ ಎಂಬುದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಆ ಚಿತ್ರದಲ್ಲಿನ ದುರಂತ ಅಂತ್ಯಕ್ಕಾಗಿ ನಾನು ಅಳಲಿಲ್ಲ, ಬದಲಿಗೆ ಆ ಅಂತ್ಯ ನಾನೇ ಆಗಿರುವುದು ನನ್ನ ಅರಿವಿಗೆ ಬಂದ ಖುಷಿಯಲ್ಲಿಯೂ ನಾನು ಅಳುತ್ತಿದ್ದೆ. 'ಸತ್ಯ' ಸಿನಿಮಾದ ಕಾರಣದಿಂದ ನನ್ನನ್ನು ನಂಬಿದ ಎಲ್ಲರಿಗೂ ನಾನು ಮಾಡಿದ ದ್ರೋಹಕ್ಕಾಗಿ ನಾನು ತಪ್ಪಿತಸ್ಥನಾಗಿ ಅಳುತ್ತಿದ್ದೆ." ಎಂದು ವರ್ಮಾ ಎಕ್ಸ್​ನಲ್ಲಿ ಬರೆದಿದ್ದಾರೆ.

"ಸತ್ಯ ಸಿನಿಮಾದ ಯಶಸ್ಸು ನನ್ನನ್ನು ಕುರುಡನನ್ನಾಗಿಸಿತ್ತು. ನನಗೆ ಮದ್ಯದ ಅಮಲು ಏರಿರಲಿಲ್ಲ. ಬದಲಿಗೆ ನನ್ನ ಸ್ವಂತ ಯಶಸ್ಸು ಮತ್ತು ನನ್ನ ಅಹಂಕಾರದ ನಶೆ ನನಗೆ ಏರಿತ್ತು. ಆದರೆ ಎರಡು ದಿನಗಳ ಹಿಂದಿನವರೆಗೂ ನನಗೆ ಇದು ತಿಳಿದಿರಲಿಲ್ಲ." ಎಂದು ರಾಮ್ ಗೋಪಾಲ್ ವರ್ಮಾ ಬರೆದಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ ಶಾಲಾ ದಿನಗಳ ಬಗ್ಗೆ ಅಚ್ಚಕನ್ನಡದಲ್ಲಿ ಮೆಲುಕು ಹಾಕಿದ ರಜನಿಕಾಂತ್​: ತಲೈವಾ ಕನ್ನಡ ಬಲು ಸೂಪರ್​​ - ವಿಡಿಯೋ - RAJINIKANTH

ETV Bharat Logo

Copyright © 2025 Ushodaya Enterprises Pvt. Ltd., All Rights Reserved.