ಹೆಡೆ ಎತ್ತಿ ಬುಸುಗುಡುತ್ತಿದ್ದ ನಾಗಪ್ಪಗೆ ಅಡ್ಡಲಾಗಿ ನಿಂತ ಶ್ವಾನಗಳು: ವೈರಲ್ ವಿಡಿಯೋ - ನಾಗರಹಾವು
🎬 Watch Now: Feature Video

ಗದಗ: ನರಗುಂದ ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಹೆಡೆ ಎತ್ತಿ ಬುಸುಗುಡುತ್ತಿದ್ದ ಸರ್ಪಕ್ಕೆ ಶ್ವಾನಗಳ ಗುಂಪು ಸುತ್ತುವರೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಮುಖಂಡ ಸಂಗಮೇಶ್ ಕೊಳ್ಳಿಯವರ ಜನ ಸಂಪರ್ಕ ಕಚೇರಿ ಆವರಣಕ್ಕೆ ಮಧ್ಯರಾತ್ರಿ ಉರಗ ಎಂಟ್ರಿಕೊಟ್ಟಿತ್ತು. ಗೋಡೆ ಪಕ್ಕದಲ್ಲಿ ಸುಳಿದಾಡುತ್ತಿದ್ದ ನಾಗರಹಾವನ್ನು ಕಂಡು ನಾಯಿಗಳು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದ್ದು, ಹಾವು ಆಚೀಚೆ ಹೋಗದಂತೆ ಅಲ್ಲೇ ಇರುವಂತಾಯ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಬುಡ್ನೆಸಾಬ್ ಹಾವನ್ನು ರಕ್ಷಿಸಿ, ಅಲ್ಲೇ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
Last Updated : Feb 3, 2023, 8:28 PM IST