ಭೂಕಂಪನದ ಮಧ್ಯೆಯೇ ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ ವೈದ್ಯರು!- ವಿಡಿಯೋ - Etv Bharat Kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18052897-thumbnail-4x3-vny.jpg)
ಅನಂತ್ನಾಗ್ (ಶ್ರೀನಗರ): ಭೂಕಂಪನ ನಡೆಯುತ್ತಿದ್ದಂತೆ ಇಲ್ಲಿಯ ಬಿಜ್ಬೆಹರಾದ ಎಸ್‌ಡಿಹೆಚ್ ಜಿಲ್ಲಾಸ್ಪತ್ರೆಯ ವೈದ್ಯರು ಲೋವರ್ ಸೆಗ್ಮೆಂಟ್ ಸಿಸೇರಿನ್ ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿ ಮಗು ಹಾಗು ತಾಯಿಯ ಜೀವ ಉಳಿಸಿದ್ದಾರೆ. ಮಂಗಳವಾರ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅದರಂತೆ ವೈದ್ಯರು ಹೆರಿಗೆ ಕಾರ್ಯಕ್ಕೆ ಮುಂದಾದ ಸಮಯದಲ್ಲಿ ಭೂಮಿ ಕಂಪಿಸಿದೆ. ಈ ವೇಳೆ ಧೃತಿಗೆಡದ ವೈದ್ಯರು ಹೆರಿಗೆ ಮಾಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ, ಲೋವರ್ ಸೆಗ್ಮೆಂಟ್ ಸಿಸೇರಿನ್ ಅನ್ನು ಸುಗಮವಾಗಿ ನಡೆಸಿದ ಎಸ್‌ಡಿಹೆಚ್ ಬಿಜ್‌ಬೆಹರಾನ ವೈದ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಸಿಬ್ಬಂದಿ ಶಸ್ತ್ರಚಿಕಿತ್ಸೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು. ವಿಡಿಯೋದಲ್ಲಿ ವೈದ್ಯರು ಹೆರಿಗೆ ಕಾರ್ಯದಲ್ಲಿದ್ದ ವೇಳೆ ಭೂಮಿ ಕಂಪಿಸುವುದನ್ನು ನೋಡಬಹುದು. ಅಫ್ಘಾನಿಸ್ತಾನದ ಹಿಂಡು ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಪರಿಣಾಮ ಅನಂತ್ನಾಗ್ ಕಣಿವೆಯಲ್ಲಿಯೂ ಭೂಮಿ ಕಂಪಿಸಿದೆ. ಜನರು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಹೊರಬಂದಿದ್ದರು.
ಇದನ್ನೂ ಓದಿ: ಅಪಘಾತದಲ್ಲಿ ತಾಯಿ, ಅಜ್ಜನ ಕಳ್ಕೊಂಡ ಯುವತಿಯಿಂದ ಹೀಗೊಂದು ಜನಜಾಗೃತಿ!- ವಿಡಿಯೋ