ಸುಬ್ರಮಣ್ಯದಲ್ಲಿ ಬಸ್ ಸೌಲಭ್ಯವಿಲ್ಲದೆ ಪರದಾಡಿದ ಭಕ್ತರು.. - ಬಸ್ಗಳನ್ನು ತಡೆದು ಪ್ರತಿಭಟನೆ
🎬 Watch Now: Feature Video
ಕುಕ್ಕೆ ಸುಬ್ರಮಣ್ಯ(ದಕ್ಷಿಣ ಕನ್ನಡ) : ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಪೂಜೆ ನಡೆದಿದೆ. ಆದರೆ ಇಲ್ಲಿಗೆ ಆಗಮಿಸಿದ್ದ ಭಾರೀ ಸಂಖ್ಯೆಯ ಭಕ್ತರು ಇಂದು ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ಸೌಕರ್ಯವಿಲ್ಲದೆ ಪರದಾಡಿದ್ದಾರೆ. ಹಬ್ಬದ ಹಿನ್ನೆಲೆ ರಜೆ ಇದ್ದಿದ್ದರಿಂದ ಕೆ ಎಸ್ ಆರ್ ಟಿ ಸಿ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಹಾಸನ, ಬೆಂಗಳೂರು ಭಾಗಕ್ಕೆ ತೆರಳುವ ಭಕ್ತರು ಬಸ್ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.