2 ಸಾವಿರ ಕೆ.ಜಿ ದ್ರಾಕ್ಷಿಯಿಂದ ಗಣಪತಿಗೆ ವಿಶೇಷ ಅಲಂಕಾರ- ವಿಡಿಯೋ - ದೇವಸ್ಥಾನದಲ್ಲಿ ಆಕರ್ಷಕ ದ್ರಾಕ್ಷಿ ಹಬ್ಬ
🎬 Watch Now: Feature Video

ಪುಣೆ (ಮಹಾರಾಷ್ಟ್ರ): ಪುಣೆಯ ಪ್ರಸಿದ್ಧ ದಗಡೂಸೇಠ್ ಹಲ್ವಾಯಿ ಗಣಪತಿ ಟ್ರಸ್ಟ್ ವತಿಯಿಂದ ಸಂಕಷ್ಟಿ ಚತುರ್ಥಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ದ್ರಾಕ್ಷಿ ಹಬ್ಬ ನಡೆಯಿತು. ದೇವಸ್ಥಾನದ ಗರ್ಭಗುಡಿ ಹಾಗೂ ಸಭಾಭವನವನ್ನು ಕಪ್ಪು ಮತ್ತು ಹಸಿರು ದ್ರಾಕ್ಷಿಯಿಂದ ಶೃಂಗರಿಸಲಾಗಿತ್ತು. ನಾಸಿಕ್‌ನಲ್ಲಿರುವ ಸಹ್ಯಾದ್ರಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯ ರೈತರು ಬೆಳೆದ 2 ಸಾವಿರ ಕೆ.ಜಿ ರಫ್ತು ಮಾಡಬಹುದಾದ ಉತ್ತಮ ಗುಣಮಟ್ಟದ ಮತ್ತು ರಾಸಾಯನಿಕ ಮುಕ್ತ ದ್ರಾಕ್ಷಿಯಿಂದ ದೇವಸ್ಥಾನ ಕಂಗೊಳಿಸಿತು.
ದೇವಸ್ಥಾನದ ಟ್ರಸ್ಟ್ ಉಪಾಧ್ಯಕ್ಷ ಸುನೀಲ್ ರಾಸ್ ಮಾತನಾಡಿ, "ಸಂಕಷ್ಟಿ ಚತುರ್ಥಿಯ ಹಿನ್ನೆಲೆಯಲ್ಲಿ ಗಣೇಶನನ್ನು 2,000 ಕೆ.ಜಿ ದ್ರಾಕ್ಷಿಯಿಂದ ಅಲಂಕರಿಸಲಾಗಿದೆ. ಹಬ್ಬದ ನಂತರ ದ್ರಾಕ್ಷಿಯನ್ನು ಭಕ್ತರು, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಸಸೂನ್ ಆಸ್ಪತ್ರೆಗೆ ಪ್ರಸಾದವಾಗಿ ನೀಡಲಾಗುತ್ತದೆ. ದ್ರಾಕ್ಷಿ ಸೀಸನ್ನಲ್ಲಿ ದೇವಸ್ಥಾನದಲ್ಲಿ ಈ ರೀತಿಯ ವ್ಯವಸ್ಥೆ ಮಾಡುತ್ತಿರುವುದು ಇದು ಎರಡನೇ ವರ್ಷ. ದಗಡೂಸೇಠ್ ಗಣಪತಿ ದೇವಸ್ಥಾನದ ಹೃದಯ ಭಾಗದಲ್ಲಿರುವ ಇಡೀ ಸಭಾಂಗಣದಲ್ಲಿ ಮಾಡಿದ ಈ ಆಕರ್ಷಕ ದೃಶ್ಯ ನೋಡಲು ಬೆಳಗ್ಗೆಯಿಂದಲೇ ಭಕ್ತರು ಸೇರಿದ್ದರು. ಹವಾಮಾನ ಬದಲಾವಣೆ ಮತ್ತು ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಾಗಿ ಪ್ರಸ್ತುತ ದ್ರಾಕ್ಷಿ ಕೃಷಿ ಬಿಕ್ಕಟ್ಟಿನಲ್ಲಿದೆ. ರೈತರು ಸಂಕಷ್ಟದಿಂದ ಹೊರಬರಲು ದೇವರ ಮೊರೆ ಹೋಗುತ್ತಿದ್ದಾರೆ" ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಲಾಸ್ ಶಿಂಧೆ ಸೇರಿದಂತೆ ಸಹ್ಯಾದ್ರಿ ರೈತ ಉತ್ಪಾದಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಇದ್ದರು.
ಇದನ್ನೂ ಓದಿ: ಶ್ರೀಕೃಷ್ಣ, ಗಣೇಶ ದೇವರ ಪೇಂಟಿಂಗ್ ಮಾಡಿ ಮನೆ ಮಾತಾದ ಮುಸ್ಲಿಂ ಮಹಿಳೆ !