ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಸಿದು ಬಿದ್ದ ವೃದ್ಧೆ.. ಪ್ರಾಥಮಿಕ ಚಿಕಿತ್ಸೆ ನೀಡಿದ ಡಿಸಿ - District Collector Dr MV Venkatesh

🎬 Watch Now: Feature Video

thumbnail

By

Published : Jul 29, 2023, 7:05 AM IST

ದಾವಣಗೆರೆ : ಕುಸಿದು ಬಿದ್ದ ವೃದ್ಧೆಗೆ ಜಿಲ್ಲಾಧಿಕಾರಿ ಡಾ ಎಂವಿ ವೆಂಕಟೇಶ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್​ನಲ್ಲಿ ಶುಕ್ರವಾರ ನಡೆದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುತ್ತಿದ್ದ ಕೋರ್ಟ್​ ಪ್ರಕರಣ ಸಂಬಂಧ ವೃದ್ಧೆಯೊಬ್ಬರು ಆಗಮಿಸಿದ್ದರು. ಈ ವೇಳೆ ವೃದ್ಧೆ ಕುಸಿದುಬಿದ್ದಿದ್ದು, ಇದನ್ನು ಗಮನಿಸಿದ ನೂತನ ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್ ಅವರು ವೃದ್ಧೆಗೆ ಪ್ರಾಥಮಿಕ‌ ಚಿಕಿತ್ಸೆ‌ ನೀಡಿದರು. ಬಳಿಕ ವೃದ್ಧೆ ಚೇತರಿಸಿಕೊಂಡರು. ಜಿಲ್ಲಾಧಿಕಾರಿ ಡಾ ಎಂ ವಿ ವೆಂಕಟೇಶ್ ಸ್ವತಃ ವೈದ್ಯರಾಗಿದ್ದು, ಎಂಡಿ ಪದವೀಧರರಾಗಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಹಾವೇರಿ‌ ಮೂಲದ ವೃದ್ಧೆ ಮುರಿಗೆಮ್ಮ ಧರ್ಮಪ್ಪ (73) ಅವರು ಪ್ರಕರಣವೊಂದರ ವಿಚಾರಣೆಗೆ ಜಿಲ್ಲಾಧಿಕಾರಿಗಳ‌ ಕೋರ್ಟ್​ಗೆ ಆಗಮಿಸಿದ್ದರು. ಕೋರ್ಟ್​ ಆವರಣದಲ್ಲಿ ಇವರು ಕುಸಿದು ಬೀಳುತ್ತಿದ್ದಂತೆ ಜಿಲ್ಲಾಧಿಕಾರಿಗಳು ಮತ್ತು ಸಿಬ್ಬಂದಿಗಳು ನೆರವಿಗೆ ಧಾವಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ : ಮರಾಠ್‌ಮೋಲಾ ಖಾದ್ಯಕ್ಕೆ ಮನಸೋತ ರಾಷ್ಟ್ರಪತಿ: ರಾಷ್ಟ್ರಪತಿ ಭವನದಲ್ಲಿ ಅಡುಗೆ ಮಾಡಲು ಶಿರಡಿಯ ಇಬ್ಬರು ಬಾಣಸಿಗರಿಗೆ ಆಹ್ವಾನ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.