'ಕರೆಂಟ್ ಬಿಲ್ ಕಟ್ಟಂಗಿಲ್ಲ' ಎಂದು ತಮಟೆ ಬಾರಿಸಿದ ವ್ಯಕ್ತಿ: ವಿಡಿಯೋ ವೈರಲ್​ - etv bharat news

🎬 Watch Now: Feature Video

thumbnail

By

Published : May 27, 2023, 10:29 PM IST

ದಾವಣಗೆರೆ: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ಕರೆಂಟ್​​​ ಉಚಿತ ಎಂದು ಹೇಳಿದ್ದರು. ಈಗ ಚುನಾವಣೆ ಮುಗಿದು ಕಾಂಗ್ರೆಸ್​ ಸರ್ಕಾರ ರಚನೆ ಆಗಿದೆ. ಕೆಲವು ಕಡೆ ಜನರು ವಿದ್ಯುತ್​​ ಶುಲ್ಕ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ವ್ಯಕ್ತಿ ಓರ್ವ ತಮಟೆ ಬಾರಿಸುತ್ತ "ಇವತ್ತಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಆದೇಶಿಸಿದ್ದಾರೆ" ಎಂದು ಡಂಗುರ ಸಾರಿರುವ ಘಟನೆ ದಾವಣಗೆರೆ ತಾಲೂಕಿನ ಗೋಣಿವಾಡ ಗ್ರಾಮದಲ್ಲಿ ನಡೆದಿದೆ. ಯಾರು ವಿದ್ಯುತ್​ ಶುಲ್ಕ ಕಟ್ಟಬೇಡಿ ಎಂದು ತಮಟೆ ಬಾರಿಸುತ್ತ ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗೇ ವೈರಲ್​ ಆಗಿದೆ. 

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಬಂದರೇ ಮೊದಲ ಕ್ಯಾಬಿನೆಟ್​ನಲ್ಲೇ ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್​​ ನಾಯಕರು ಭರವಸೆ ನೀಡಿದ್ದರು. ಆದರೆ, ಇದನ್ನೇ ನಂಬಿಕೊಂಡ ಹಲವಾರು ಜನರು ಕರೆಂಟ್​​ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ.  

ಇದನ್ನೂ ಓದಿ: ಕರೆಂಟ್ ಬಿಲ್ ಕಟ್ಬೇಡಿ, ಬಸ್ ಟಿಕೆಟ್ ತಗೋಬೇಡಿ: ಜನರಿಗೆ ಆರ್. ಅಶೋಕ್ ಕರೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.