ದಸರಾ ಮ್ಯಾರಥಾನ್: 4 ಕಿ.ಮೀ ಓಡಿದ ಚಾಮರಾಜನಗರ ಡಿಸಿ ಶಿಲ್ಪಾನಾಗ್ - DC Shilpanag Participated in Marathon

🎬 Watch Now: Feature Video

thumbnail

By ETV Bharat Karnataka Team

Published : Oct 18, 2023, 11:35 AM IST

ಚಾಮರಾಜನಗರ  : ಚಾಮರಾಜನಗರ ದಸರಾ ಪ್ರಯುಕ್ತ ಇಂದು ನಗರದಲ್ಲಿ ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆ ನಡೆಯಿತು. ಚಾಮರಾಜೇಶ್ವರ ದೇವಾಲಯ ಆವರಣದಲ್ಲಿ ಮ್ಯಾರಥಾನ್​ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸ್ಪರ್ಧಿಗಳ ಜೊತೆ ತಾವೂ ಕೂಡ ಮ್ಯಾರಥಾನ್​​ನಲ್ಲಿ ಭಾಗವಹಿಸಿದರು.

ಚಾಮರಾಜೇಶ್ವರ ದೇವಾಲಯದಿಂದ ಹೊರಟ ಈ ಮ್ಯಾರಥಾನ್, ಜೋಡಿ ರಸ್ತೆ, ಕೋರ್ಟ್ ರಸ್ತೆ ಮೂಲಕ ಚಾಮರಾಜನಗರ ಪ್ರವಾಸಿ ಮಂದಿರದಲ್ಲಿ ಕೊನೆಗೊಂಡಿತು‌. ಡಿಸಿ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಸಾತ್​ ನೀಡಿದರು. ಮ್ಯಾರಥಾನ್ ನಡೆಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ನಾನೂ ಕೂಡ ಮ್ಯಾರಥಾನ್ ಪಟು. ಕೆಲಸದ ಒತ್ತಡದಿಂದ ಅಥ್ಲೀಟ್​ನಲ್ಲಿ ಭಾಗಿಯಾಗಿರಲಿಲ್ಲ. ನಮ್ಮ ಚಾಮರಾಜನಗರ ಆರೋಗ್ಯಯುತ ಚಾಮರಾಜನಗರ ಆಗಬೇಕು. ಜಿಲ್ಲಾದ್ಯಂತ ದಸರಾ ಸಂಭ್ರಮ ಕಳೆಗಟ್ಟಿದ್ದು ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಮ್ಯಾರಥಾನ್​ ಜೊತೆಗೆ ಇತರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಪ್ಲಾಗಾಥಾನ್​ ಹಮ್ಮಿಕೊಳ್ಳುವ ಮೂಲಕ ಪರಿಸರ ಕಾಳಜಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಹೇಳಿದರು. 20 ರಂದು ಪ್ರಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಮೈಸೂರು ದಸರಾ: ಗಮನಸೆಳೆದ ಕರಾವಳಿಯ ಚೆಂಡೆವಾದನ- ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.