ಮೈಸೂರಿನಂತೆ ಕರಾವಳಿಯಲ್ಲೂ ನಡೀತಿದೆ ದಸರಾ ಬೊಂಬೆಗಳ ಪ್ರದರ್ಶನ- ವಿಡಿಯೋ - ​ ETV Bharat Karnataka

🎬 Watch Now: Feature Video

thumbnail

By ETV Bharat Karnataka Team

Published : Oct 22, 2023, 5:43 PM IST

ಕಾರವಾರ (ಉತ್ತರ ಕನ್ನಡ): ನವರಾತ್ರಿಯ ಸಂದರ್ಭದಲ್ಲಿ ಬೊಂಬೆಗಳನ್ನಿಟ್ಟು ಆಚರಿಸುವ ಸಂಪ್ರದಾಯ ಮೈಸೂರು, ಅಕ್ಕಪಕ್ಕದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಅಷ್ಟೇನೂ ರೂಢಿಯಲ್ಲಿಲ್ಲ. ಆದರೆ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಅಂಕೋಲಾದಲ್ಲಿ ವಕೀಲರೊಬ್ಬರು ಕಳೆದ ಕೆಲವು ವರ್ಷಗಳಿಂದ ದಸರಾ ಬೊಂಬೆಗಳನ್ನಿಟ್ಟಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದ್ದಾರೆ.

ಕಾಕರಮಠದ ವಕೀಲ ನಿರಂಜನ ಪ್ರಸಾದ ಮತ್ತು ಕುಟುಂಬ ಕಳೆದ ಮೂರು ವರ್ಷಗಳಿಂದ ದಸರಾ ಹಬ್ಬದ ನಿಮಿತ್ತ ಗೊಂಬೆಗಳ ಪ್ರದರ್ಶನ ಆಯೋಜಿಸುತ್ತಿದೆ. ಗೊಂಬೆಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಮತ್ತು ಸತ್ಕಾರ್ಯಗಳನ್ನು ಪರಿಚಯಿಸುವುದು ಅವರ ಉದ್ದೇಶ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಮತ್ತು ನೀತಿ ಕಥೆಗಳ ಮೂಲಕ ಯುವ ಪೀಳಿಗೆಯ ಉನ್ನತೀಕರಣವಾಗಬೇಕು ಎಂಬುದು ಅವರ ಅಪೇಕ್ಷೆ. 

ನವರಾತ್ರಿ ಆರಂಭದ ದಿನ ಆರಾಧ್ಯ ದೇವಿಯಾಗಿರುವ ಶ್ರೀ ಚಾಮುಂಡೇಶ್ವರಿಯ ಕಳಶ ಪ್ರತಿಷ್ಠಾಪಿಸಿ ಗೊಂಬೆಗಳ ಪ್ರದರ್ಶನ ಆರಂಭಿಸುತ್ತಾರೆ. ನವರಾತ್ರಿಯ 9 ದಿನಗಳಲ್ಲಿ ನಿರಂಜನ್ ಪ್ರಸಾದ್ ಅವರು ತಮ್ಮ ಮಗಳು ಶುಕ್ಲಾ ನಿರಂಜನ ಪ್ರಸಾದ್ ಅವರಿಗೆ 9 ರೀತಿಯ ವೇಷಭೂಷಣಗಳ ಅಲಂಕಾರ ಮಾಡಿಸಿ ಪ್ರದರ್ಶನಕ್ಕೆ ಬಂದ ವೀಕ್ಷಕರಿಗೆ ಗೊಂಬೆಗಳ ಬಗ್ಗೆ ಮಾಹಿತಿ ನೀಡುವಂತೆ ತರಬೇತಿ ನೀಡಿರುವುದು ವಿಶೇಷ. ಪತ್ನಿ ರೇಷ್ಮಾ ಈ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. 

ಮೈಸೂರು, ಬೆಂಗಳೂರು ಮತ್ತು ಚನ್ನಪಟ್ಟಣ ಸೇರಿದಂತೆ ವಿವಿಧ ಪ್ರದೇಶಗಳ ಗೊಂಬೆ ಇವರ ಸಂಗ್ರಹದಲ್ಲಿದೆ. ಸಾವಿರಾರು ರೂಪಾಯಿ ವ್ಯಯಿಸಿ ಪ್ರತಿ ವರ್ಷ ಗೊಂಬೆಗಳನ್ನು ಖರೀದಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಪ್ರದರ್ಶನ ವೀಕ್ಷಿಸಲು ಬರುವವರಿಗೆ ಸಿಹಿ ವಿತರಿಸಿ ಅರಿಶಿನ-ಕುಂಕುಮ ನೀಡಲಾಗುತ್ತದೆ. 

ಇದನ್ನೂ ಓದಿ: ತುಮಕೂರಿನಲ್ಲಿ ನವರಾತ್ರಿ ಸಂಭ್ರಮ: ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗಿಂದು ಸಂತಾನ ಲಕ್ಷ್ಮಿ ಅಲಂಕಾರ - ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.