ಸೂರತ್ ರೈಲು ನಿಲ್ದಾಣದಲ್ಲಿ ಹರಿದು ಬಂದ ಜನಸಾಗರ: ರೈಲು ಹತ್ತಲೂ ಪ್ರಯಾಣಿಕರ ಪರದಾಟ.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Nov 10, 2023, 6:15 PM IST
ಸೂರತ್ (ಗುಜರಾತ್): ಸದ್ಯ ದೇಶದಲ್ಲಿ ದೀಪಾವಳಿ ಹಬ್ಬದ ಕಳೆಗಟ್ಟಿದೆ. ಈಗಾಗಲೇ ಜನರು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದು ರೈಲು, ಬಸ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಇಂದು ಸೂರತ್ ರೈಲು ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳು ಜಮಾಯಿಸಿರುವ ದೃಶ್ಯಕಂಡು ಬಂತು. ಹಬ್ಬಕೆ ಒಂದು ದಿನ ಮಾತ್ರ ಬಾಕಿ ಉಳಿದ ಕಾರಣ ರೈಲು, ಬಸ್ಗಳು ಬಹುತೇಕ ಭರ್ತಿಯಾಗಿ ಸಂಚರಿಸುತ್ತಿವೆ.
ಸೂರತ್‌ನಿಂದ ಛಾಪ್ರಾಗೆ ಹೋಗಲು ಪ್ರಯಾಣಿಕರು ಹಿಂಡು ಹಿಂಡಾಗಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದಾರೆ. ಬಹುತೇಕ ರೈಲುಗಳು ಭರ್ತಿಯಾಗಿ ಸಂಚರಿಸುತ್ತಿದ್ದರಿಂದ ಪ್ರಯಾಣಿಕರು 24 ಗಂಟೆಗಳ ಮುಂಚಿತವಾಗಿ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಸೂರತ್‌ನಿಂದ ಛಾಪ್ರಾಗೆ ಹೋಗಲು ಟಿಕೆಟ್ ಹೊಂದಿದ್ದರೂ ಕೂಡ ಟ್ರೈನ್ನಲ್ಲಿ ಹತ್ತಲಾಗದೇ ಕೆಲ ಪ್ರಯಾಣಿಕರು ಪರದಾಡಿರುವ ಘಟನೆ ನಡೆದಿದೆ. ಜತೆಗೆ ಪ್ರಯಾಣಿಕರು ರೈಲಿನಲ್ಲಿ ಸ್ಥಳ ಸಿಕ್ಕ ಕಡೆ ಕುಳಿತುಕೊಂಡು ಪ್ರಯಾಣಿಸುತ್ತಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸ್‌ಗಢದ ಲಕ್ಷಾಂತರ ಜನರು ಸೂರತ್‌ನಲ್ಲಿ ವಾಸಿಸುತ್ತಿದ್ದಾರೆ. ಉತ್ತರ ಭಾರತದ 25 ಲಕ್ಷಕ್ಕೂ ಹೆಚ್ಚು ಜನರು ಸೂರತ್ ನಗರದಲ್ಲಿ ವಾಸಿಸುತ್ತಿದ್ದಾರೆ. ಛಾಪ್ರಾಗೆ ತೆರಳಲು ಕೇವಲ ಒಂದು ಪ್ಯಾಸಿಂಜೆರ್ ಟ್ರೈನ್ ಮಾತ್ರ ಇರುವ ಕಾರಣ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಆದಾಗ್ಯೂ ಎಕ್ಸ್ಪ್ರೆಸ್, ವಿಶೇಷ ರೈಲುಗಳು ಸೀಟ್ಗಳು ಮುಂಗಡವಾಗಿಯೇ ಭರ್ತಿಯಾಗಿವೆ.
ಇದನ್ನೂ ಓದಿ: ದೆಹಲಿಯ ಹಲವೆಡೆ ಮಳೆ, ವಾಯು ಮಾಲಿನ್ಯದಿಂದ ಮುಕ್ತಿ ಸಿಗುವ ಭರವಸೆ- ವಿಡಿಯೋ