ಕಡಬದಲ್ಲಿ ರಸ್ತೆಗೆ ಬಂದ ಮೊಸಳೆ... ಹಿಡಿದು ನದಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ - ಕಡಬದಲ್ಲಿ ರಸ್ತೆಗೆ ಬಂದ ಮೊಸಳೆ
🎬 Watch Now: Feature Video
ಕಡಬ(ದಕ್ಷಿಣ ಕನ್ನಡ): ತಾಲೂಕಿನ ಆಲಂಕಾರು ಸಮೀಪದ ಕೊಂಡಾಡಿಕೊಪ್ಪ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ರಸ್ತೆಯಲ್ಲಿ ಮೊಸಳೆ ಪತ್ತೆಯಾಗಿದೆ. ಶಾಲೆಯ ಹತ್ತಿರದಲ್ಲಿ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಮೊಸಳೆ ಗಮನಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಾಲಚಂದ್ರ ಗೌಡ ಮತ್ತು ರವಿಕುಮಾರ್ ಅವರು ತಕ್ಷಣ ಸ್ಥಳಕ್ಕೆ ಆಗಮಿಸಿ, ಸ್ಥಳಿಯರು ಮತ್ತು ಇಲ್ಲಿನ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿದು ಸುರಕ್ಷಿತವಾಗಿ ಕುಮಾರಧಾರ ನದಿಗೆ ಬಿಟ್ಟಿದ್ದಾರೆ.
Last Updated : Feb 3, 2023, 8:31 PM IST