ರಾಜಾರೋಷವಾಗಿ ಬೀದಿಯಲ್ಲೇ ನಡೆದುಕೊಂಡ ಹೋದ ಮೊಸಳೆ! - ಹೊಸ ಸೇತುವೆಯ ಮೇಲೆ ಈ ಮೊಸಳೆ
🎬 Watch Now: Feature Video

ರಾಜಸ್ಥಾನದ ಕೆರೆಗಳ ನಗರಿ ಉದಯಪುರದಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವೊಂದು ಸಂಚಲನ ಮೂಡಿಸುತ್ತಿದೆ. ವಿಡಿಯೋದಲ್ಲಿ ಮೊಸಳೆಯೊಂದು ರಸ್ತೆಯಲ್ಲಿ ತೆವಳುತ್ತಿರುವುದನ್ನು ಕಾಣಬಹುದು. ಸುಭಾಷ್ ನಗರದಿಂದ ಅಯಾದ್ ಮ್ಯೂಸಿಯಂಗೆ ಸಂಪರ್ಕ ಕಲ್ಪಿಸುವ ಹೊಸ ಸೇತುವೆಯ ಮೇಲೆ ಈ ಮೊಸಳೆ ಕಾಣಿಸಿಕೊಂಡಿದೆ. ನದಿಯ ಮೇಲೆ ನಿರ್ಮಿಸಲಾದ ಸೇತುವೆ ಎತ್ತರ ತುಂಬಾ ಕಡಿಮೆಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಸುಮಾರು 4 ಅಡಿಗಳ ಎತ್ತರದವರೆಗೆ ನೀರು ಹರಿದು ಸುಮಾರು 15 ದಿನಗಳ ಕಾಲ ಸೇತುವೆ ಮುಚ್ಚಿತ್ತು. ಮಳೆಗಾಲದಲ್ಲಿಯೇ ಮೊಸಳೆಗಳು ಸೇತುವೆ ಮೇಲೆ ಕಾಣಿಸುವುದು ಸಾಮಾನ್ಯವಾಗಿದೆ. ಮೊಸಳೆ ಪ್ರತ್ಯಕ್ಷವಾದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Last Updated : Feb 3, 2023, 8:32 PM IST