ಆನೇಕಲ್: ಕ್ಯಾಂಟರ್ ಹರಿದು ಇಬ್ಬರು ಪಾದಚಾರಿಗಳು ಸಾವು: ವಿಡಿಯೋ - ಕ್ಯಾಂಟರ್
🎬 Watch Now: Feature Video
ಆನೇಕಲ್(ಬೆಂಗಳೂರು): ಕ್ಯಾಂಟರ್ ವಾಹನ ಹರಿದು ಇಬ್ಬರು ಪಾದಚಾರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಆನೇಕಲ್ನ ಹೆಬ್ಬಗೋಡಿಯಲ್ಲಿ ನಡೆದಿದೆ. ಅಪಘಾತದಲ್ಲಿ ಆಶಿಕ್ (28), ಮನೋಜ್ ಕುಮಾರ್(30) ಮೃತಪಟ್ಟಿದ್ದು, ಇವರು ಬಿಹಾರ ಮತ್ತು ತಮಿಳುನಾಡಿನಿಂದ ಬಂದಿದ್ದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದೆ. ಹುಸ್ಕೂರ್ ಫ್ರೂಟ್ ಮಾರ್ಕೆಟ್ನಿಂದ ಹಣ್ಣು ಲೋಡ್ ಮಾಡಿಕೊಂಡು ಅತೀ ವೇಗವಾಗಿ ಬಂದ ಕ್ಯಾಂಟರ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಬ್ಬಗೋಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ಕ್ಯಾಂಟರ್ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇನ್ನು, ಕ್ಯಾಂಟರ್ ಪಾದಚಾರಿಗಳಿಗೆ ಡಿಕ್ಕಿ ಹೊಡೆಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರತ್ಯೇಕ ಘಟನೆ.. ಕ್ಯಾಂಟರ್ ಪಲ್ಟಿಯಾಗಿ ಚಾಲಕ ಸೇರಿ ಇಬ್ಬರ ಸಾವು: ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಸಾಗಿಸುವ ಕ್ಯಾಂಟರ್ ಮಗುಚಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ. ಈ ಘಟನೆ ಆನೇಕಲ್ನ ಜಿಗಣಿ-ಹಾರೋಹಳ್ಳಿ ಮುಖ್ಯ ರಸ್ತೆಯ ಕುಪ್ಪಸಿದ್ದಯ್ಯನದೊಡ್ಡಿ ಬಳಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದೆ ಈ ಅಪಘಾತ ಸಂಭವಿಸಿದೆ. ಬಿಹಾರ ಮೂಲದ ಅಖಿಲೇಶ್ ಮತ್ತು ಮಿಥಿಲೇಶ್ ಮೃತರು. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮರು ಸೃಷ್ಟಿಯಾಯ್ತು ಬಾಹುಬಲಿ ದೃಶ್ಯ: ಜೀವದ ಹಂಗು ತೊರೆದು ಮಗನಿಗಾಗಿ ಹರಸಾಹಸ.. ಇದು ರೀಲ್ ಅಲ್ಲ ರಿಯಲ್ - ವಿಡಿಯೋ