ETV Bharat / business

ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಷೇರುಪೇಟೆಯಲ್ಲಿ ಏರಿಕೆ: ಸತತ ಐದನೇ ದಿನವೂ ಜಿಗಿತ - UNION BUDGET 2025

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಆರಂಭಿಕ ಷೇರುಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆಯಾಗಿವೆ.

STOCK MARKET  UNION BUDGET  NIRMALA SITHARAMAN UNION BUDGET  ಕೇಂದ್ರ ಬಜೆಟ್ 2025
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Feb 1, 2025, 10:42 AM IST

ಮುಂಬೈ: 2025ರ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಶನಿವಾರದ ಆರಂಭಿಕ ಷೇರುಪೇಟೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಏರಿಕೆಯಾಗಿರುವುದು ಕಂಬಂದಿವೆ. ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 136.44 ಅಂಕಗಳ ಜಿಗಿತ ಕಂಡು ಬಂದಿದ್ದು, 77,637.01ಕ್ಕೆ ತಲುಪಿತು. ಎನ್‌ಎಸ್‌ಇ ನಿಫ್ಟಿ 20.2 ಅಂಕಗಳ ಏರಿಕೆಯಾಗಿ 23,528.60ಕ್ಕೆ ತಲುಪಿತು.

ಐಟಿಸಿ ಹೋಟೆಲ್ಸ್, ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ, ಸನ್ ಫಾರ್ಮಾ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎನ್‌ಟಿಪಿಸಿ ಅತಿ ಹೆಚ್ಚು ಲಾಭ ಗಳಿಸಿದೆ. ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ನೆಸ್ಲೆ, ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯವು ಇಳಿಕೆ ಕಂಡು ಬಂದಿದೆ.

"ಕೇಂದ್ರ ಬಜೆಟ್ ಹಿನ್ನೆಲೆ, ಬಜೆಟ್​ನಲ್ಲಿ ಘೋಷಣೆಗಳು ಮಾರುಕಟ್ಟೆಯ ಮೇಲೆ ತ್ವರಿತವಾದ ಪರಿಣಾಮಗಳನ್ನು ಬೀರುತ್ತವೆ. ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ಹಾಗೂ ಬಳಕೆಯನ್ನು ಹೆಚ್ಚಿಸಲು ವೈಯಕ್ತಿಕ ಆದಾಯ ತೆರಿಗೆ ಕಡಿತಗೊಳಿಸುವುದು ಬಜೆಟ್‌ನ ಮುಖ್ಯ ನಿರೀಕ್ಷೆಯಾಗಿವೆ. ಇದರಿಂದ ಮಾರುಕಟ್ಟೆಯಲ್ಲಿ ಚೇತರಿಕೆಗೆ ಅನುಕೂಲ ಆಗಲಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ತಿಳಿಸಿದ್ದಾರೆ.

ಮುಂಬರುವ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.3ರಿಂದ 6.8 ರಷ್ಟು ವಿಸ್ತರಿಸುವ ಸಾಧ್ಯತೆಯಿದೆ. ಇದು ಅಭಿವೃದ್ಧಿ ಹೊಂದಿದ ದೇಶವಾಗಲು ಅಗತ್ಯವಿರುವ ಪ್ರಮಾಣಕ್ಕಿಂತ ತೀರಾ ಕಡಿಮೆಯಾಗಿದೆ. ಜೊತೆಗೆ ಬೆಳವಣಿಗೆಯನ್ನು ಉತ್ತೇಜಿಸಲು ಭೂಮಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಅನಿಯಂತ್ರಣ ಮತ್ತು ಸುಧಾರಣೆಗಳ ಅಗತ್ಯವಿದೆ ಎಂದು ಸರ್ಕಾರದ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ ಹೇಳಿದೆ.

ರಜಾ ದಿನವಾಗಿದ್ದರಿಂದ ಏಷ್ಯಾದ ಮಾರುಕಟ್ಟೆಗಳು ಶನಿವಾರ ಮುಚ್ಚಲ್ಪಟ್ಟಿವೆ. ಇನ್ನು ಅಮೆರಿಕದ ಮಾರುಕಟ್ಟೆಯು ಶುಕ್ರವಾರ ಕುಸಿತದೊಂದಿಗೆ ಮುಕ್ತಯವಾಗಿದೆ. ವಿನಿಮಯ ದತ್ತಾಂಶದ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ ₹1,188.99 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ಕಚ್ಚಾ ತೈಲವು ಬ್ಯಾರೆಲ್‌ಗೆ ಶೇ.0.14 ರಷ್ಟು ಕುಸಿದು 76.76 ಡಾಲರ್‌ಗೆ ತಲುಪಿದೆ. ನಿನ್ನೆ (ಶುಕ್ರವಾರ) ಸತತ ನಾಲ್ಕನೇ ದಿನವು ಏರಿಕೆಯಾಗುವ ಮೂಲಕ ಬಿಎಸ್‌ಇ 740.76 ಅಂಕ (ಶೇ. 0.97 ರಷ್ಟು) ಜಿಗಿತ ಕಂಡು 77,500.57ಕ್ಕೆ ಕೊನೆಗೊಂಡಿತು. ನಿಫ್ಟಿ 258.90 ಅಂಕ (ಶೇ.1.11) ರಷ್ಟು ಏರಿಕೆಯಾಗಿ 23,508.40ಕ್ಕೆ ತಲುಪಿತ್ತು.

ಇದನ್ನೂ ಓದಿ: ಬಜೆಟ್ ಮೇಲೆ ಕೋಟ್ಯಂತರ ನಿರೀಕ್ಷೆಗಳು: ಹೆಚ್ಚಳವಾಗುತ್ತಾ ಆದಾಯ ತೆರಿಗೆ ಮಿತಿ, ಬಡ ಮತ್ತು ಮಧ್ಯಮ ವರ್ಗದವರಿಗೆ ಆಗುತ್ತಾ ವರದಾನ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.