ಉಡುಪಿ: ರೈಲ್ವೆ ಬ್ರಿಡ್ಜ್ನಲ್ಲಿ ಸಿಲುಕಿದ ಹಸುವಿನ ರಕ್ಷಣೆ - ವಿಡಿಯೋ - ಹಸುವಿನ ರಕ್ಷಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/19-11-2023/640-480-20060673-thumbnail-16x9-newsss.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 19, 2023, 3:45 PM IST
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಸಮೀಪದ ರೈಲ್ವೆ ಬ್ರಿಡ್ಜ್ನಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ತಂಡ ಮತ್ತು ಸ್ಥಳೀಯರು ಯಶಸ್ವಿ ಆಗಿದ್ದಾರೆ.
ಬ್ರಿಡ್ಜ್ ಕೆಳಗಿನ ಪಿಲ್ಲರ್ನಲ್ಲಿದ್ದ ಹಸು: ಬಿಜೂರು ಸಮೀಪದ ರೈಲ್ವೆ ಬ್ರಿಡ್ಜ್ ಕೆಳಗಿನ ಪಿಲ್ಲರ್ ಬಳಿ ಹಸು ಇರುವ ದೃಶ್ಯ ಸಾರ್ವಜನಿಕರ ಗಮನಕ್ಕೆ ಬಂದಿತ್ತು. ರೈಲಿನ ವೇಗಕ್ಕೆ ಹಸು ಆಯತಪ್ಪಿ ಕೆಳಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ತಂಡ, ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: 'ಧೂಮ್' ಸಿನಿಮಾ ನಿರ್ದೇಶಕ ಸಂಜಯ್ ಗಧ್ವಿ ಹೃದಯಾಘಾತದಿಂದ ನಿಧನ
ಹಸುವನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿ: ರಕ್ಷಣಾ ಕಾರ್ಯಾಚರಣೆ ನೆಡೆಸಿ ಕೆಲ ಗಂಟೆಗಳ ನಂತರ ಹಸುವನ್ನು ಮೇಲೆತ್ತಿದ್ದಾರೆ. ಗೋಮಾತೆಯನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ತಂಡ ಯಶಸ್ವಿಯಾಗಿದ್ದು, ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ, ಸಮಾಜ ಸೇವಕ ಸುಬ್ರಹ್ಮಣ್ಯ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂಗೆ ತಾರೆಗಳ ಮೆರುಗು: ಅನುಷ್ಕಾ, ದೀಪ್ವಿರ್ ಸೇರಿ ಹಲವರು- ವಿಡಿಯೋ