ವಾರ್ಡನಲ್ಲಿ ಕೋಮು ಸೌಹಾರ್ದತೆ ಕಾಪಾಡಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೌನ್ಸಿಲರ್ - Karimganj Ward
🎬 Watch Now: Feature Video
ಗಯಾ( ಬಿಹಾರ) : ಗಯಾ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮಗೆ ಸಿಕ್ಕಿರುವ ಪುರಸಭೆಯ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ತಮ್ಮ ವಾರ್ಡ್ನಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ತಾನು ನಿಂತು ಅವಿರೋಧವಾಗಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದ ಕರೀಂಗಂಜ್ ವಾರ್ಡ್ ಅನ್ನು ಹಿಂದೂ ಸಮುದಾಯಕ್ಕೆ ಸೇರಿದ ತನ್ನ ಸ್ನೇಹಿತನ ಆಯ್ಕೆಗೆ ದಾರಿ ಮಾಡಿಕೊಟ್ಟಿದ್ದಾರೆ.
ನಗರಸಭೆ ವಾರ್ಡ್ ನಂ. 26 ಕೌನ್ಸಿಲರ್, ಅಬ್ರಾರ್ ಅಹ್ಮದ್ ಅವರು ತಮ್ಮ ಸ್ನೇಹಿತ ಹಾಗೂ ಮಾಜಿ ಉಪಮೇಯರ್ ಆಗಿರುವ ಅಖುರಿ ಓಂಕಾರನಾಥ್ ಎಂಬುವರಿಗೋಸ್ಕರ ಈ ತ್ಯಾಗ ಮಾಡಿದ್ದಾರೆ. ಅಹ್ಮದ್ ಅವರು ಕಳೆದ ಐದು ವರ್ಷಗಳಲ್ಲಿ ಮೂರು ಬಾರಿ ಅವಿರೋಧವಾಗಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ಯಾವ ರೀತಿ ವಾರ್ಡ್ನಲ್ಲಿ ಜನ ಮನ್ನಣೆ ಪಡೆದಿದ್ದರು ಎಂದು. ಹೀಗಿದ್ದರೂ ಅಬ್ರಾರ್ ಅಹ್ಮದ್ ಅವರು ತನ್ನ ಸ್ನೇಹಿತನಿಗೊಸ್ಕರ ಹಾಗೂ ಕೋಮು ಸೌಹಾರ್ದತೆ ಕಾಪಾಡಲು ಈ ಧೃಡ ನಿರ್ಧಾರ ತೆಗೆದುಕೊಂಡು ತನ್ನ ಸಮುದಾಯದ ಜನರಿಗೆ ಸ್ನೇಹಿತನನ್ನು ಬೆಂಬಲಿಸುವಂತೆ ಕರೆಕೊಟ್ಟಿದ್ದಾರೆ.
ಬಹುಶಃ ಬಿಹಾರದ ಈ ಮುಸ್ಲಿಂ ಕೌನ್ಸಿಲರ್ ತನ್ನ ಹಿಂದೂ ಸ್ನೇಹಿತನಿಗಾಗಿ ವಾರ್ಡ್ ಬಿಟ್ಟುಕೊಟ್ಟು ಜೊತೆಗೆ ತನ್ನ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿದರ್ಶನ ದೇಶದಲ್ಲಿ ಇದೇ ಮೊದಲ ಎನ್ನಬಹುದು. ಅಬ್ರಾರ್ ಪ್ರತಿನಿಧಿಸುವ ಕರೀಂಗಂಜ್ ವಾರ್ಡ ಸುಮಾರು 10,000 ಜನಸಂಖ್ಯೆಯನ್ನು ಹೊಂದಿದ್ದು, ಅತಿಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ವಾರ್ಡ್ ಆಗಿದೆ.
ಇದೇ ಸಂಧರ್ಭದಲ್ಲಿ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅಬ್ರಾರ್ ಅಹ್ಮದ್ ಅವರು ತಮ್ಮ ಆಶಯವನ್ನು "ಪ್ರಜಾಪ್ರಭುತ್ವ ಭಾರತದ ಸೌಂದರ್ಯ" ಎಂದು ಬಣ್ಣಿಸಿದರು. ಒಬ್ಬ ಮುಸ್ಲಿಂ ಕೌನ್ಸಿಲರ್ ತನ್ನ ಹಿಂದೂ ಸ್ನೇಹಿತನಿಗಾಗಿ ಇಂತ ದೊಡ್ಡ ತ್ಯಾಗವನ್ನು ಮಾಡಿ ಅತಿ ಹೆಚ್ಚು ಮುಸ್ಲಿಂ ಸಮುದಾಯದ ಜನರು ಇರುವ ವಾರ್ಡ್ ಅನ್ನು ಮುನ್ನಡೆಸಲು ಆಹ್ವಾನಿಸಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಷಯವಾಗಿದೆ. ಮೋಹನ್ ಶ್ರೀವಾಸ್ತವ ಅವರು ವಾರ್ಡ್ ನಂಬರ್ 11 ರಿಂದ ಸ್ಪರ್ಧೆ ಮಾಡಿ ಚುನಾವಣೆಯಲ್ಲಿ ಸೋತಿದ್ದರೂ. ಈ ಸೊಲು ನಿಜಕ್ಕೂ ನನಗೆ ನಿರಾಶೆ ತಂದಿತ್ತು ಎಂದು ಹೇಳಿದರು.
ಇದನ್ನೂ ಓದಿ :ಬಿಹಾರ: ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆ.. ಸ್ಥಿತಿ ಗಂಭೀರ