ಸಾವಿತ್ರಿಬಾಯಿ ಫುಲೆ ಕುರಿತು ಅಕ್ಷೇಪಾರ್ಹ ಲೇಖನ: ಎನ್‌ಸಿಪಿ ಪ್ರತಿಭಟನೆ - maharashtra CM
🎬 Watch Now: Feature Video
ಮುಂಬೈ (ಮಹಾರಾಷ್ಟ್ರ): ಖ್ಯಾತ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರು ಕುರಿತು ಅಕ್ಷೇಪಾರ್ಹ ಲೇಖನ ಬರೆದಿರುವ ವೆಬ್ಸೈಟ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯ ಮುಖಂಡರು ಬುಧವಾರ ಮುಂಬೈ ಪೊಲೀಸ್ ಕಮಿಷನರ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಇಂಡಿಕ್ ಟೇಲ್ಸ್ ಮತ್ತು ಹಿಂದೂ ಪೋಸ್ಟ್ ಎಂಬ ಎರಡು ವೆಬ್‌ಸೈಟ್ ಸಮಾಜ ಸುಧಾರಕಿ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನದ ಬಗ್ಗೆ ಅತ್ಯಂತ ಕೆಳಮಟ್ಟದಲ್ಲಿ ಬರೆದಿವೆ ಮತ್ತು ಆಕ್ಷೇಪಾರ್ಹ ಭಾಷೆಯನ್ನೂ ಬಳಸಿದೆ ಮತ್ತು ಈ ರೀತಿ ಲೇಖನಗಳಿಂದ ಜನರನ್ನು ಪ್ರಚೋದಿಸುವ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎನ್‌ಸಿಪಿ ಹಿರಿಯ ನಾಯಕರಾದ ಅಜಿತ್ ಪವಾರ್, ಮಾಜಿ ಉಪಮುಖ್ಯಮಂತ್ರಿ ಛಗನ್ ಭುಜಬಲ್ ಅವರು ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದಾರೆ. ಪ್ರತಿಭಟನೆಯಲ್ಲಿ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಮಾಜಿ ಸಂಸದ ಸಮೀರ್ ಭುಜಬಲ್, ಮಾಜಿ ಶಾಸಕ ಪಂಕಜ್ ಭುಜಬಲ್ ಮತ್ತು ಪಕ್ಷದ ಕಾರ್ಯಾಕರ್ತರು ಉಪಸ್ಥಿತರಿದ್ದರು.
ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಿಎಂ: ಪ್ರತಿಭಟನೆ ಕಾವು ಏರುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಘಟನೆಗೆ ಸಂಬಂಧಿಸಿದಂತೆ ಅಕ್ಷೇಪಾರ್ಹ ಲೇಖನವನ್ನು ಬರೆದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಐಎನ್ಎಸ್ ವಿಕ್ರಾಂತ್‌ನಲ್ಲಿ ಎಂಎಚ್-60 'ರೋಮಿಯೋ' ಹೆಲಿಕಾಪ್ಟರ್ ಲ್ಯಾಂಡಿಂಗ್ ಯಶಸ್ವಿ..