ಕೇಂದ್ರದ ಸಾಧನೆಯನ್ನು ತಮ್ಮ ಸಾಧನ ಎಂಬಂತೆ ಬಿಂಬಿಸುತ್ತಿದೆ ಕಾಂಗ್ರೆಸ್: ಬಾದಾಮಿ ಅಭ್ಯರ್ಥಿ ಎಸ್ ಟಿ ಪಾಟೀಲ - Congress portraying
🎬 Watch Now: Feature Video

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಾಸಕರಾಗಿರುವಂತಹ ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎಸ್ ಟಿ ಪಾಟೀಲ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಅಭಿವೃದ್ಧಿ ಮಾಡಿಲ್ಲ, ಕೇಂದ್ರ ಸರ್ಕಾರದ ಯೋಜನೆಗಳನ್ನು ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ಅವರು ಅಭಿವೃದ್ಧಿ ಮಾಡದ ಹಿನ್ನೆಲೆ, ಕ್ಷೇತ್ರ ಬಿಟ್ಟು ಹೋಗಿದ್ದು, ಈ ಸಲ ಮತದಾರರು ಬಿಜೆಪಿ ಪಕ್ಷಕ್ಕೆ ಒಲವು ತೋರಿಸುತ್ತಿದ್ದಾರೆ ಎಂದು ಅಭ್ಯರ್ಥಿ ಎಸ್ ಟಿ ಪಾಟೀಲ ತಮ್ಮ ಅಭಿಪ್ರಾಯವನ್ನು ಈ ಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಇದ್ದ ಗೊಂದಲ ಬಗೆಹರಿಸಿ, ಮಾಜಿ ಶಾಸಕರಾದ ಎಂ ಕೆ ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪೂರ ಅವರ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಬಾದಾಮಿಯಲ್ಲಿ ಕೇವಲ ರಸ್ತೆ, ಏತ ನೀರಾವರಿ ಸೇರಿದಂತೆ ಇತರ ಅಭಿವೃದ್ಧಿ ಯೋಜನೆ ಮಾಡಿರುವುದಾಗಿ ಕಾಂಗ್ರೆಸ್ ಪಕ್ಷದವರು ಹೇಳುತ್ತಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರಲ್ಲಿ ಮತದಾರರನ್ನು ಓಲೈಸುವ ತಂತ್ರ ಮಾಡಿದ್ದಾರೆ. ಆದರೆ, ಬಾದಾಮಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಇತರ ಕೆಲಸ ಕಾರ್ಯ ಆಗಿಲ್ಲ. ಮುಂದೆ ನಮ್ಮ ಸರ್ಕಾರ ಬಂದಾಗ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಪ್ರತಿ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ಎಸ್ ಟಿ ಪಾಟೀಲ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದನ್ನೂ ನೋಡಿ: VIDEO: ಸ್ಯಾಂಡಲ್ವುಡ್ ತಾರೆಯರಿಂದ ಭರ್ಜರಿ ಪ್ರಚಾರ.. ರಂಗೇರಿದ ಚುನಾವಣಾ ಕಣ