ಧಾರವಾಡದಲ್ಲಿ ಐಐಟಿ ಆಗೋಕೆ ಕಾರಣವೇ ಕಾಂಗ್ರೆಸ್: ವಿನಯ್ ಕುಲಕರ್ಣಿಯಿಂದ ವಿಡಿಯೋ ಬಿಡುಗಡೆ..

🎬 Watch Now: Feature Video

thumbnail

By

Published : Mar 11, 2023, 3:57 PM IST

ಧಾರವಾಡ: ''ಧಾರವಾಡದಲ್ಲಿ ಐಐಟಿ ಆಗೋಕೆ ಕಾಂಗ್ರೆಸ್ ಪ್ರಮುಖವಾದ ಕಾರಣವಾಗಿದೆ. ವಿಡಿಯೋ ಬಿಡುಗಡೆ ಮಾಡುವ ಮೂಲಕ ಐಐಟಿ ಆರಂಭಿಸಿದ್ದು ನಾವೇ'' ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.

''ಐಐಟಿ ಉದ್ಘಾಟನೆ ಆಗುತ್ತಿದ್ದು ಖುಷಿ ತಂದಿದೆ. ಐಐಟಿ ಬಂದ ವೇಳೆ ರಾಯಚೂರಿಗೆ ಹೋಗಬೇಕು ಅಂತ ಚರ್ಚೆ ಆಗಿತ್ತು. ಆಗ ನಾವೆಲ್ಲರೂ ಧಾರವಾಡಕ್ಕೆ ಬರಬೇಕು ಅಂತ ಒತ್ತಾಯ ಮಾಡಿದ್ದೆವು. ಆದರೂ ಅವಾಗ ರಾಯಚೂರು ಹಾಗೂ ಮೈಸೂರಿಗೆ ಐಐಟಿ ವರ್ಗಾವಣೆಯಾಗಿತ್ತು. ಅದನ್ನು ಮರಳಿ ತರಲು ನಾವೆಲ್ಲ ದೊಡ್ಡ ಹೋರಾಟ ಮಾಡಬೇಕಾಯಿತು. ಅಂದು ಮಾಡಿದ ಹೋರಾಟದ ಪ್ರತಿಫಲವಾಗಿ ಇಂದು ಐಐಟಿ ಉದ್ಘಾಟನೆ ಆಗುತ್ತಿದೆ ಎಂದು ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.

ಅಂದಿನ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ 500 ಎಕರೆ ಜಮೀನು ಒದಗಿಸಿದ್ದರು. ಐಐಟಿ ಇಲ್ಲಿಗೆ ಬರಬೇಕು ಅಂದ್ರೆ, ಹಲವು ನಿಯಮಗಳಿದ್ದವು. ರೈಲ್ವೆ ಸೇರಿದಂತೆ ವಿಮಾನ ಹಾಗೂ ಬಸ್ ಸೌಕರ್ಯ ಎಲ್ಲವನ್ನು ನಾವು ತೋರಿಸಿದ್ದೆವು. ಬಿಜೆಪಿಯವರು ಸಹ ನಮ್ಮ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದಾರೆ. ನಾವು ಹಿಂದೆ ಬೇಡಿಕೆ ಇಟ್ಟ ಹಾಗೆ ಶೇ.25 ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು. ಜಾಗ ನೀಡಿದ ಮಕ್ಕಳಿಗೆ ಡಿ ದರ್ಜೆ ಕೆಲಸ ನೀಡಬೇಕು. ನಾಳೆ ನಡೆಯುವ ಕಾರ್ಯಕ್ರಮದ ವೇಳೆ ಇದನ್ನು ಘೋಷಣೆ ಮಾಡಬೇಕು ಎಂದು ವಿನಯ್ ಕುಲಕರ್ಣಿ ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ರಾಜ್ಯ ವಿಧಾನಸಭಾ ಅವಧಿ ಮೇ 24ಕ್ಕೆ ಅಂತ್ಯ: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.