ರಾಜಸ್ಥಾನ ಬಿಕ್ಕಟ್ಟು: ಸಿಎಂ ಗೆಹ್ಲೋಟ್​ ಜೊತೆ ಖರ್ಗೆ, ರಾಹುಲ್​ ಗಾಂಧಿ ಚರ್ಚೆ - ರಾಜಸ್ಥಾನ ವಿಧಾನಸಭಾ ಚುನಾವಣೆ

🎬 Watch Now: Feature Video

thumbnail

By

Published : May 29, 2023, 8:03 PM IST

ನವದೆಹಲಿ: ರಾಜಸ್ಥಾನದಲ್ಲಿ ಇದೇ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಿಎಂ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ಮಧ್ಯೆ ಬಹಿರಂಗ ಕುಸ್ತಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ಬಿಕ್ಕಟ್ಟು ಶಮನಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರೇ ಅಖಾಡಕ್ಕಿಳಿದಿದ್ದಾರೆ. ಇಂದು ಉಭಯ ನಾಯಕರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸುತ್ತಿದ್ದಾರೆ.

ದಿಲ್ಲಿಯ ಎಐಸಿಸಿ ಅಧ್ಯಕ್ಷರ ಕಚೇರಿಗೆ ಆಗಮಿಸಿರುವ ಸಿಎಂ ಅಶೋಕ್​ ಗೆಹ್ಲೋಟ್​ ಅವರು, ಖರ್ಗೆ ಅವರ ಜೊತೆ ಕೆಲ ಹೊತ್ತು ಚರ್ಚೆ ನಡೆಸುತ್ತಿದ್ದಾರೆ. ಇದೇ ವೇಳೆ ಪಕ್ಷದ ನಾಯಕ ರಾಹುಲ್​ ಗಾಂಧಿ, ರಾಜ್ಯ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವಾ ಕೂಡ ಸಭೆಗೆ ಆಗಮಿಸಿದರು. ಇದಾದ ಬಳಿಕ ಖರ್ಗೆ ಅವರನ್ನು ಸಚಿನ್ ಪೈಲಟ್ ಭೇಟಿಯಾಗಲಿದ್ದಾರೆ.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಚಿನ್​ ಪೈಲಟ್ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಇಲ್ಲವಾದಲ್ಲಿ ಸರ್ಕಾರದ ವಿರುದ್ಧವೇ ದೊಡ್ಡಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮೊದಲು 5 ದಿನಗಳ ಕಾಲ ಜನಸಂಘರ್ಷ ಯಾತ್ರೆ ನಡೆಸಿದ್ದರು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಗೆಹ್ಲೋಟ್‌ vs ಪೈಲಟ್‌: ಇಬ್ಬರು ನಾಯಕರ ಬೇಡಿಕೆ ಆಲಿಸಲಿರುವ ಖರ್ಗೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.